ವಿಧಾನಸಭಾ ಚುನಾವಣೆ| SDPI ರಾಷ್ಟ್ರೀಯ ಚುನಾವಣಾ ವೀಕ್ಷಕರು ಇಂದು ದ.ಕ ಜಿಲ್ಲಾ ಪ್ರವಾಸ

Prasthutha|

ಮಂಗಳೂರು: ಮುಂಬರುವ ವಿಧಾನಸಭಾ ಚುನಾವಣಾ ಹಿನ್ನೆಲೆಯ ಪೂರ್ವ ತಯಾರಿಯನ್ನು ವೀಕ್ಷಿಸಲು ಹಾಗೂ ವಿವಿಧ ಚುನಾವಣಾ ಘಟಕಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲು ಇಂದು SDPI ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ದೆಹ್ಲಾನ್ ಬಾಖವಿ ಹಾಗೂ ರಾಷ್ಟ್ರೀಯ ಚುನಾವಣಾ ವೀಕ್ಷಕರಾದ ವಿ.ಎಮ್ ಫೈಝಲ್ ರವರು ದ.ಕ ಜಿಲ್ಲಾ ಪ್ರವಾಸವನ್ನು ಕೈಗೊಂಡಿದ್ದಾರೆ.

- Advertisement -

ಆ ಪ್ರಯುಕ್ತ ಬಂಟ್ವಾಳದಲ್ಲಿ 11 ಗಂಟೆಗೆ ಮತ್ತು ಉಳ್ಳಾಲದಲ್ಲಿ ಸಂಜೆ‌ 4 ಗಂಟೆಗೆ ಚುನಾವಣೆಯ ವಿವಿಧ ಘಟಕಗಳ ಉಸ್ತುವಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಇವರೊಂದಿಗೆ ರಾಜ್ಯ ಚುನಾವಣಾ ಉಸ್ತುವಾರಿಗಳಾದ ಅಫ್ಸರ್ ಕೊಡ್ಲಿಪೇಟೆ ಹಾಗೂ ಸಹ ಉಸ್ತುವಾರಿ ಗಳಾದಂತಹ ನವಾಝ್ ಉಳ್ಳಾಲ ಮತ್ತು ಜಿಲ್ಲಾ ನಾಯಕರು ವಿಧಾನಸಭಾ ಅಭ್ಯರ್ಥಿಗಳು ಕೂಡ ಭಾಗವಹಿಸಲಿದ್ದಾರೆ ಎಂದು SDPI ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp