SDPI ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಸಮಿತಿಯ ನೂತನ ಕಛೇರಿ ಮತ್ತು ಕಾರ್ಪೋರೇಟರ್ ಕಛೇರಿ ಉದ್ಘಾಟನೆ

Prasthutha|

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿ ನೂತನ ಕಛೇರಿ ಹಾಗೂ ಕಾರ್ಪೊರೇಟರ್ ಕಛೇರಿಯ ಉದ್ಘಾಟನೆಯು ದಿನಾಂಕ 10-09-2023 ಆದಿತ್ಯವಾರ ಸಂಜೆ 4.30 ಚೊಕ್ಕಬೆಟ್ಟುವಿನಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಉಸ್ಮಾನ್ ಗುರುಪುರ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

- Advertisement -

ನೂತನ ಅಸೆಂಬ್ಲಿ ಕಛೇರಿಯನ್ನು SDPI ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಹಾಗೂ ಕಾರ್ಪೊರೇಟರ್ ಕಛೇರಿಯನ್ನು SDPI ದ.ಕ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು ರವರು ಉದ್ಘಾಟಿಸಿದರು.


ಇಸ್ಮಾಯಿಲ್ ದಾರಿಮಿ ಉಸ್ತಾದ್ ದುಅ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು, ಕಾರ್ಪೋರೇಟರ್ ಶಂಶಾದ್ ಅಬೂಬಕ್ಕರ್, ಜಿಲ್ಲಾ ಸಮಿತಿ ಸದಸ್ಯ ಸಮೀಮ್ ಹಳೆಯಂಗಡಿ, M.J.M ಮಸೀದಿ ಕಾರ್ಯದರ್ಶಿ ಶಿಯಾಬುದ್ದೀನ್, ಹಿಬಾದುಲ್ಲಾ ಚೊಕ್ಕಬೆಟ್ಟು, ವಿಮ್ ಜಿಲ್ಲಾ ಕಾರ್ಯದರ್ಶಿ ಅಝ್ವೀನಾ, ವಿಮ್ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷೆ ಅಫ್ಸ ಹಾಗೂ ಇನ್ನಿತರ ಗಣ್ಯ ಅತಿಥಿಗಳು ಉಪಸ್ಥಿತರಿದ್ದರು.

Join Whatsapp