ಅಗತ್ಯ ವಸ್ತುಗಳ ಮೇಲೆ ಜಿ ಎಸ್ ಟಿ ಹೇರಿಕೆ ವಿರುದ್ಧ SDPI ಕಬಕ ಗ್ರಾಮ ಸಮಿತಿ ವತಿಯಿಂದ ಪ್ರತಿಭಟನೆ

Prasthutha|

ಪುತ್ತೂರು: ಅಗತ್ಯ ವಸ್ತುಗಳ ಮೇಲೆ ಜಿ ಎಸ್ ಟಿ ಹೇರಿಕೆ ಮಾಡಿದ ಕೇಂದ್ರ ಸರಕಾರದ ಕ್ರಮದ ವಿರುದ್ದ SDPI ಕಬಕ ಗ್ರಾಮ ಸಮಿತಿ ವತಿಯಿಂದ ಕಬಕ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತು.

- Advertisement -

 SDPI ದ.ಕ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲ್ ಅವರು ಮಾತನಾಡಿ ನೋಟು ಬ್ಯಾನ್ ಮೂಲಕ ಜನ ಸಾಮಾನ್ಯರ ಜೀವನದ ಜೊತೆ ಚೆಲ್ಲಾಟವಾಡಿದ ಬಿಜೆಪಿ ಸರಕಾರ ಈಗ ಜನರ ದೈನಂದಿನ ಆಹಾರ ವಸ್ತುಗಳ ಮೇಲೆ GST ಹೊರಿಸಿ ಜನರ ಜೀವನವನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತಿದೆ. ಬಿಜೆಪಿ ಸರಕಾರ ಈ ಜನವಿರೋಧಿ GST ಯನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಕಬಕ ಗ್ರಾಮ ಪಂಚಾಯತ್ ಸದಸ್ಯರಾದ ಫಾರೂಕ್ ತವಕ್ಕಲ್ ರವರು ಪ್ರಾಸ್ತಾವಿಕವಾಗಿ ಮಾತಾಡಿದರು.

- Advertisement -

ಈ ಸಂದರ್ಭದಲ್ಲಿ ಎಸ್‌ಡಿಪಿಐ ನಾಯಕರಾದ ಶಮೀರ್ ಮುರ, ಸಜ್ಜಾದ್ ಮುರ ಮೊದಲಾದವರು ಉಪಸ್ಥಿತರಿದ್ದರು. ನೌಷಾದ್ ಕೆದುವಡ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



Join Whatsapp