ಸುರತ್ಕಲ್ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ನೂತನ ಸಮಿತಿ ರಚನೆಯಾಗಿದ್ದು, ಸಮಿತಿಯ ನೂತನ ಅಧ್ಯಕ್ಷರಾಗಿ ಉಸ್ಮಾನ್ ಗುರುಪುರ ಆಯ್ಕೆಯಾದರು.
ಚೊಕ್ಕಬೆಟ್ಟು ಎಂ.ಜೆ.ಎಂ ಹಾಲ್‌ನಲ್ಲಿ ನಡೆದ ಮಧ್ಯಂತರ ಕ್ಷೇತ್ರ ಪ್ರತಿನಿಧಿ ಸಭೆಯಲ್ಲಿ ಆಂತರಿಕ ಚುನಾವಣೆಯ ಮೂಲಕ ಕ್ಷೇತ್ರ ಸಮಿತಿಯನ್ನು ಪುನರ್ ರಚಿಸಲಾಯಿತು.
ನೂತನ ಸಮಿತಿಯ ಉಪಾಧ್ಯಕ್ಷರಾಗಿ ನಾಸಿರ್ ಉಳಾಯಿಬೆಟ್ಟು ಆಯ್ಕೆಯಾಗಿದ್ದು, ಕಾರ್ಯದರ್ಶಿಯಾಗಿ ಅಝರ್ ಉಳಾಯಿಬೆಟ್ಟು, ಜೊತೆ ಕಾರ್ಯದರ್ಶಿಯಾಗಿ ಅಝರ್ ಚೊಕ್ಕಬೆಟ್ಟು, ಸಿದ್ದೀಕ್ ಅಂಗರಗುಂಡಿ, ಕೋಶಾಧಿಕಾರಿಯಾಗಿ ನೌಶಾದ್ ಚೊಕ್ಕಬೆಟ್ಟು ಆಯ್ಕೆಯಾಗಿದ್ದಾರೆ. ಸಮಿತಿಯ ಸದಸ್ಯರಾಗಿ ಯಾಸೀನ್ ಅರ್ಕುಳ, ನೂರುಲ್ಲ ಕುಳಾಯಿ, ಫಯಾಝ್ ಕಾಟಿಪಳ್ಳ, ಸಂಶುದ್ದೀನ್ ಕೃಷ್ಣಾಪುರ, ಇರ್ಫಾನ್ ಕಾನ ಆಯ್ಕೆಯಾದರು.
ಎಸ್.ಡಿ.ಪಿ.ಐ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಸಭೆಯನ್ನು ನಡೆಸಿಕೊಟ್ಟರು. ಕ್ಷೇತ್ರ ವ್ಯಾಪ್ತಿಯ ಪಕ್ಷದ ಚಟುವಟಿಕೆ ಬಗ್ಗೆ ವರದಿಯನ್ನು ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಝರ್ ಉಳಾಯಿಬೆಟ್ಟು ಸಭೆಯ ಮುಂದೆ ಮಂಡಿಸಿದರು.
ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ- ಉಪಾಧ್ಯಕ್ಷರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.
ಸಭೆಯಲ್ಲಿ SDPI ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಅಡ್ಡೂರು, ಕ್ಷೇತ್ರ ವ್ಯಾಪ್ತಿಯ ಬ್ಲಾಕ್ ಪದಾಧಿಕಾರಿಗಳು, ಕ್ಷೇತ್ರ ಸಮಿತಿಯ ನಾಯಕರು ಉಪಸ್ಧಿತರಿದ್ದರು.