ನವದೆಹಲಿ: ಸಿಎಎ ವಿರುದ್ಧ ಸೋಶಿಯಲ್ ಡೆಮಾಕ್ರಟಿ ಪಾರ್ಟಿ ಆಫ್ ಇಂಡಿಯಾ ಹೋರಾಟ ಮುಂದುವರೆಸಿದ್ದು, ಸುಪ್ರೀಂ ಕೋರ್ಟ್ ನಲ್ಲಿ ರಿಟ್ ಫೈಲ್ ಮಾಡಿದೆ.
2019ರ ಡಿಸೆಂಬರ್ 11 ರಂದು ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಸಿಎಎ ವಿರುದ್ಧ ಭಾರತದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿದೆ. ಪ್ರತಿಭಟನೆ ತೀವ್ರಗೊಂಡಾಗ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಕಾನೂನನ್ನು ಹಿಂತೆಗೆದುಕೊಂಡು ನಿಯಮಾವಳಿಗಳನ್ನು ತಿದ್ದುಪಡಿ ಮಾಡಲು ಒಪ್ಪಿಕೊಂಡಿತ್ತು.
ಇದೀಗ, ವಿರೋಧ ಮತ್ತು ಪ್ರತಿಭಟನೆಗಳ ನಡುವೆಯೂ ಕೇಂದ್ರ ಸರ್ಕಾರ ಸೋಮವಾರ ಸಿಎಎ ಕಾನೂನನ್ನು ಅನುಷ್ಠಾನಕ್ಕೆ ತಂದಿದೆ. ಗೆಜೆಟ್ ಅಧಿಸೂಚನೆಯ ಹೊರಡಿಸಿದ್ದು, ನಿಯಮಗಳು ತಕ್ಷಣದಿಂದಲೇ ಜಾರಿಗೆ ಬರುತ್ತವೆ ಎಂದು ಸೂಚಿಸಿದೆ.
ಇದರಿಂದ ಮತ್ತೊಮ್ಮೆ ಈ ಸಂಬಂಧ ಪ್ರತಿಭಟನೆ ಆರಂಭಗೊಂಡಿದ್ದು, ವಿಭಜಕ ಧೋರಣೆಯ ಇದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಸೋಶಿಯಲ್ ಡೆಮಾಕ್ರಟಿ ಪಾರ್ಟಿ ಆಫ್ ಇಂಡಿಯಾ ಹೇಳಿದೆ. ಈ ಸಂಬಂಧ ಭಾರಿ ಪ್ರತಿಭಟನೆ ಮಾಡುತ್ತಿರುವುದರ ಮಧ್ಯೆ ಸುಪ್ರೀಂ ಕೋರ್ಟ್‌ನಲ್ಲಿ ಸಿಎಎ ವಿರುದ್ಧ ರಿಟ್ ಫೈಲ್ ಮಾಡಿದೆ.