ಸಂತೋಷ್ ಆತ್ಮಹತ್ಯೆ । ಕ್ರಿಮಿನಲ್ ಕೇಸು ದಾಖಲಿಸಿ ಈಶ್ವರಪ್ಪರನ್ನು ಕೂಡಲೇ ಬಂಧಿಸಿ: ಎಸ್.ಡಿ.ಪಿ.ಐ

Prasthutha|

ಬೆಂಗಳೂರು: ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ  ಸಂತೋಷ್ ಪಾಟೀಲ್ ‘ಕೆ.ಎಸ್ ಈಶ್ವರಪ್ಪನವರೇ ನನ್ನ ಸಾವಿಗೆ ನೇರ ಕಾರಣ’ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಮಾಡಿಕೊಂಡಿದ್ದು, ಆತ್ಮಹತ್ಯೆಗೆ ಪ್ರೇರಣೆ ಕೇಸನ್ನು ದಾಖಲಿಸಿ ಸಚಿವ ಕೆ.ಎಸ್ ಈಶ್ವರಪ್ಪರನ್ನು ಕೂಡಲೇ ಬಂಧಿಸಬೇಕೆಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಒತ್ತಾಯಿಸಿದ್ದಾರೆ.

- Advertisement -

ಸಂತೋಷ್ ಪಾಟೀಲ್ ಕಳೆದ ಒಂದು ವರ್ಷದಿಂದ 40% ಕಮಿಷನ್ ಬಗ್ಗೆ ಪೀಡಿಸುತ್ತಿರುವ ವಿಚಾರವಾಗಿ ನಿರಂತರ ಹೋರಾಟ ನಡೆಸುತ್ತಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಗೂ ಪತ್ರವನ್ನು ಬರೆದಿದ್ದರು, ಮಾತ್ರವಲ್ಲ ಬಿಜೆಪಿಯ ಹಿರಿಯ ಮುಖಂಡರುಗಳನ್ನು ಭೇಟಿಯಾಗಿ ನ್ಯಾಯಕ್ಕಾಗಿ ಆಗ್ರಹಿಸಿದ್ದರು.  ಆದರೆ ಇದುವರೆಗೆ ಬಿಜೆಪಿಯದೇ ಕಾರ್ಯಕರ್ತನಾದ ಸಂತೋಷ್ ಗೆ ಯಾವುದೇನ್ಯಾಯ ದೊರಕಿಲ್ಲ ಬದಲಾಗಿ ಆತ್ಮಹತ್ಯೆಗೆ ಪ್ರೇರಣೆ ಲಭಿಸಿತ್ತು ಎಂದು ಅವರ ಡೆತ್ ನೋಟಿನಿಂದ ಬಹಿರಂಗವಾಗುತ್ತದೆ ಎಂದು ಹೇಳಿದ್ದಾರೆ.

ಹಿಂದೂ ನಾವೆಲ್ಲರೂ ಒಂದು’ ಎನ್ನುತ್ತಾ ನಿರಂತರ ಕೋಮು ದ್ವೇಷವನ್ನು ಬಿತ್ತುತ್ತಿರುವ ಸಂಘಪರಿವಾರಿಗಳಿಗೆ, ತಾಕತ್ತಿದ್ದರೆ ನಿಮ್ಮದೇ ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಸಾವಿನ ನ್ಯಾಯಕ್ಕಾಗಿ, ಕೆ.ಎಸ್ ಈಶ್ವರಪ್ಪರನ್ನು ಬಂಧಿಸಬೇಕೆಂದು ಆಗ್ರಹಿಸಿ ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸಿ ಎಂದು  ಮಜೀದ್ ನೇರ ಸವಾಲನ್ನು ಎಸೆಗಿದ್ದಾರೆ.

Join Whatsapp