ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಮಾದಕವಸ್ತುಗಳ ಮಾರಾಟ ವ್ಯಾಪಕ ; ಪೋಲೀಸರು ಕ್ರಮ ಜರುಗಿಸಬೇಕು : ತಾಜುದ್ದೀನ್ ಉಪ್ಪಳ ಗೇಟ್

Prasthutha|

ಮಂಜೇಶ್ವರ : ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಮಾದಕವಸ್ತುಗಳು ಹಾಗೂ ತಂಬಾಕು ಉತ್ಪನ್ನಗಳ ಮಾರಾಟ ವ್ಯಾಪಕವಾಗುತ್ತಿದೆ. ಇದರ ವಿರುದ್ಧ ಪೋಲೀಸರು ಕ್ರಮ ಜರುಗಿಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಮಂಜೇಶ್ವರ ಮಂಡಲ ಸಮಿತಿ ಕೋಶಾಧಿಕಾರಿ ತಾಜುದ್ದೀನ್ ಉಪ್ಪಳ ಗೇಟ್ ಆಗ್ರಹಿಸಿದ್ದಾರೆ.

- Advertisement -

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಶಾಲಾ ಕಾಲೇಜುಗಳನ್ನು ಕೇಂದ್ರೀಕರಿಸಿ ತಂಬಾಕು ಉತ್ಪನ್ನಗಳ ಹಾಗೂ ಮಾದಕವಸ್ತುಗಳ ಮಾರಾಟ ವ್ಯಾಪಕವಾಗುತ್ತಿದೆ. ಶಾಲೆಗೆ ಹೋಗುವ ಚಿಕ್ಕ ಮಕ್ಕಳು ಕೂಡಾ ಈ ತರಹದ ನಿಷೇಧಿತ ಪಾನ್ ಮಸಾಲ , ತಂಬಾಕು ಹಾಗೂ ಮಾದಕ ವಸ್ತುಗಳಿಗೆ ದಾಸರಾಗುತ್ತಿರುವುದು ಕಂಡುಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಭವಿಷ್ಯದ ತಲೆಮಾರುಗಳನ್ನು ಮಾದಕ ವ್ಯಸನಿಗಳನ್ನಾಗಿ ಮಾಡುವುದರೊಂದಿಗೆ ದಿನಂಪ್ರತಿ ವಿದ್ಯಾರ್ಥಿಗಳೂ ಸೇರಿ ಯುವ ಜನತೆ ಮಾದಕ ದ್ರವ್ಯಗಳಿಗೆ ದಾಸರಾಗುವುದು ಹೆಚ್ಚುತ್ತಿರುವುದನ್ನು ನೋಡುತ್ತಿದ್ದೇವೆ. ಬೆಳೆಯುತ್ತಿರುವ ಹೊಸ ತಲೆಮಾರನ್ನು ಮಾದಕ ವ್ಯಸನಿಗಳನ್ನಾಗಿ ಮಾಡುವುದರ ಹಿಂದೆ ಇರುವವರನ್ನು ಹುಡುಕಿ ಪೊಲೀಸ್ ಅಧಿಕಾರಿಗಳು ಸ್ವಯಂ ಕೇಸ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ತಾಜುದ್ದೀನ್ ಆಗ್ರಹಿಸಿದ್ದಾರೆ.