ಮೋದಿಯನ್ನು ದೂಷಣೆ ಮಾಡಿದ ಕಾರಣಕ್ಕಾಗಿ ಪತ್ನಿಯ ಮೇಲೆ ಶಿಸ್ತು ಕ್ರಮ ಕೈಗೊಂಡ ಬ್ಯಾರಿ ಸಾಹಿತ್ಯ ಅಕಾಡೆಮಿ ಸಮಿತಿಯ ನಡೆ ಖಂಡನಾರ್ಹ: SDPI

Prasthutha|

ಮಂಗಳೂರು: ಮೋದಿಯನ್ನು ದೂಷಣೆ ಮಾಡಿದ ಕಾರಣಕ್ಕಾಗಿ ಪತ್ನಿಯ ಮೇಲೆ ಶಿಸ್ತು ಕ್ರಮ ಕೈಗೊಂಡ ಬ್ಯಾರಿ ಸಾಹಿತ್ಯ ಅಕಾಡೆಮಿ ಸಮಿತಿಯ ನಡೆಯನ್ನು SDPI ಖಂಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಮೋದಿಯನ್ನು ದೂಷಣೆ ಮಾಡಿದ್ದನ್ನು ನೆಪವಾಗಿರಿಸಿ, ಆ ಪೋಸ್ಟ್ ಗೆ ಯಾವುದೇ ರೀತಿಯಲ್ಲಿ ಸಂಬಂಧವೇ ಇಲ್ಲದ ಆತನ ಹೆಂಡತಿಯನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸಮಿತಿ ಯಿಂದ ವಜಾಗೊಳಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಮತ್ತು ಸರ್ಕಾರದ ದಮನಕಾರಿ ನೀತಿಯ ಭಾಗವಾಗಿದೆ. ನಿಜವಾಗಿ ಅಕಾಡೆಮಿಗಳು ಇರುವುದು ಭಾಷೆ, ಸಾಹಿತ್ಯವನ್ನು ಅಭಿವೃದ್ಧಿ ಪಡಿಸುವ ವೇದಿಕೆ ಹೊರತು ರಾಜಕೀಯ ಮಾಡುವುದಕ್ಕಲ್ಲವೆಂಬ ಪರಿಜ್ಞಾನ ಇಲ್ಲದಿರುವುದು ವಿಪರ್ಯಾಸ ಎಂದು ಹೇಳಿದೆ.

- Advertisement -

ತಮ್ಮ ವಿರುದ್ಧ ಮಾತೆತ್ತುವವರ ಧ್ವನಿಯನ್ನು ಸದ್ದಡಗಿಸುವ ಉತ್ತರ ಪ್ರದೇಶ ಮಾದರಿಯಂತೆ ಬ್ಯಾರಿ ಅಕಾಡೆಮಿ ಸಾಹಿತ್ಯ ಸಮಿತಿಯ ಅಧ್ಯಕ್ಷರು ಕೂಡ ಮಾಡುತ್ತಿರುವುದು ನಾಚಿಗೆಕೇಡು. ಕೊರೋನಾ ಎರಡನೇ ಅಲೆಯನ್ನು ನಿರ್ವಹಿಸಲು ಸಂಪೂರ್ಣ ವೈಫಲ್ಯ ಅನುಭವಿಸಿದ ಮೋದಿ ಸರ್ಕಾರದ ವಿರುದ್ಧ ಒಂದಕ್ಷರವೂ ಮಾತೆತ್ತದ ಬ್ಯಾರಿ ಅಕಾಡೆಮಿ ಸಮಿತಿ ,ಇದೀಗ ಮೋದಿಯನ್ನು ದೂಷಿಸಿದವರ ಪತ್ನಿಯ ವಿರುದ್ಧ ದ್ವೇಷ ಸಾಧಿಸಿ ತೆಗೆದುಕೊಂಡಿರುವ ಕ್ರಮವೂ ಬಾಲಿಷತನವಾದುದೆಂದು SDPI ದ.ಕ ಜಿಲ್ಲಾದ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Join Whatsapp