ಧರ್ಮಗಳ ಮಧ್ಯೆ ಒಡಕು ಮೂಡಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಯಾವುದೇ ಹೇಳಿಕೆಗಳನ್ನು SDPI ಖಂಡಿಸುತ್ತದೆ: ಅನ್ವರ್ ಸಾದತ್ ಬಜತ್ತೂರು

Prasthutha|

ಉಳ್ಳಾಲ: ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ತನ್ನ ಎಲುಬಿಲ್ಲದ ನಾಲಿಗೆಯನ್ನು ಮತ್ತೊಮ್ಮೆ ಹರಿಯಬಿಟ್ಟಿದ್ದು, ಮುಸ್ಲಿಮರ ವಿರುದ್ಧ ತನ್ನ ಹಳೇ ಚಾಳಿಯನ್ನು ಮತ್ತೆ ಮುಂದುವರಿಸಿದ್ದಾರೆ. ಇವರ ವಿರುದ್ಧ SDPI ಪಕ್ಷವು ಕಾನೂನು ಹೋರಾಟ ನಡೆಸುತ್ತದೆ ಎಂದು SDPI ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ತಿಳಿಸಿದ್ದಾರೆ.
ದೇರಳಕಟ್ಟೆಯಲ್ಲಿ SDPI ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ನಡೆಸಿದ ಪ್ರತಿಭಟನೆಯಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ, ಮತ್ತೊಬ್ಬ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಕೂಡಾ ಸಮಾಜವನ್ನು ಧ್ರುವೀಕರಿಸುವ ಮಾತುಗಳನ್ನನ್ನಾಡುತ್ತಿದ್ದು ಇದನ್ನು ಕಟು ಶಬ್ದಗಳಿಂದ ಟೀಕಿಸಿದರು.
ಧರ್ಮಗಳ ನಡುವೆ ಒಡಕುಂಟು ಮಾಡಿ ಸಮಾಜದಲ್ಲಿ ಅಶಾಂತಿ ಹಬ್ಬಿಸುವ ಯಾವುದೇ ಹೇಳಿಕೆಗಳನ್ನು SDPI ಪಕ್ಷವು ಖಂಡಿಸುತ್ತದೆ. ಮಾತ್ರವಲ್ಲ ಸವಿಂದಾನತ್ಮಕವಾಗಿ ಪ್ರತಿಭಟಿಸಿ ಕಾನೂನು ಸಮರ ನಡೆಸುತ್ತದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
SDPI ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇರ್ಶಾದ್ ಅಜ್ಜಿನಡ್ಕ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮುಸ್ಲಿಂ ಒಕ್ಕೂಟ ಉಳ್ಳಾಲ ಇದರ ಅಧ್ಯಕ್ಷರಾದ ಹಸೈನಾರ್ ಬಸ್ತಿಪಡ್ಪು, SDPI ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ, ಜೊತೆ ಕಾರ್ಯದರ್ಶಿ ಸಲಾಂ ವಿದ್ಯಾ ನಗರ,ಸದಸ್ಯರಾದ ಸುಹೈಲ್ ಉಳ್ಳಾಲ್, ಪಾವೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅನ್ಸಾರ್ ಇನೊಳಿ, ಉಳ್ಳಾಲ ನಗರ ಸಮಿತಿ ಉಪಾಧ್ಯಕ್ಷರಾದ ಇಮ್ತಿಯಾಝ್ ಕೋಟೆಪುರ, ಶಕೀಲ್ ತಲಪಾಡಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.



Join Whatsapp