ಎಸ್.ಡಿ.ಪಿ.ಐ ವತಿಯಿಂದ ಅದ್ಧೂರಿ ಕೇರಳ ರಾಜ್ಯೋತ್ಸವ ಆಚರಣೆ; ಘೋಷಯಾತ್ರೆ

Prasthutha|

ಮಂಜೇಶ್ವರ : “ನಮ್ಮ ಕೇರಳ ನಮ್ಮ ಮಲಯಾಳ” ಎಂಬ ಘೋಷವಾಕ್ಯದೊಂದಿಗೆ ನವೆಂಬರ್ 1 ಕೇರಳ ರಾಜ್ಯೋತ್ಸವ ದಿನದಂದು ಕೇರಳ ಎಸ್.ಡಿ.ಪಿ.ಐ ಘಟಕ ರಾಜ್ಯಾದ್ಯಂತ ಘೋಷಯಾತ್ರೆ ನಡೆಸಿತು.

- Advertisement -

 ಕೇರಳ ರಾಜ್ಯೋತ್ಸವ ದಿನದ ಆಚರಣೆಯ ಭಾಗವಾಗಿ ಪಕ್ಷದ ಮಂಜೇಶ್ವರ ಕ್ಷೇತ್ರ ಸಮಿತಿಯ ನೇತೃತ್ವದಲ್ಲಿ ಹೊಸಂಗಡಿ ಪೇಟೆಯಿಂದ ಸಾವಿರಾರು ಮಂದಿ ಸಾರ್ವಜನಿಕರು ಭಾಗವಹಿಸಿದ್ದ ಘೋಷಯಾತ್ರೆ ವಾಮಂಜೂರ್ ಚೆಕ್ ಪೋಸ್ಟ್ ನ ಹತ್ತಿರದಲ್ಲಿರುವ ಪ್ಲೇ ಆಫ್ ಗ್ರೌಂಡ್ ನಲ್ಲಿ ಸಮಾಪ್ತಿಗೊಂಡಿತು.

ನಂತರ ನಡೆದ ಸಾರ್ವಜನಿಕ ಸಭೆಯನ್ನು ಎಸ್.ಡಿ.ಪಿ.ಐ ಕೇರಳ ರಾಜ್ಯ ಕಾರ್ಯದರ್ಶಿ ಜೋನ್ಸನ್ ಕಂಡಂಚಿರ ಉದ್ಘಾಟನೆಗೈದರು.

- Advertisement -

ದೇಶದ ವೈಶಿಷ್ಟ್ಯ ಹಾಗೂ ಇತಿಹಾಸಗಳನ್ನೊಳಗೊಂಡ ವೈವಿಧ್ಯತೆಗಳನ್ನು ಮರೆ ಮಾಚಿ, ಒಕ್ಕೂಟ ವ್ಯವಸ್ಥೆಯನ್ನು ಸಹ ಧ್ವಂಸಗೊಳಿಸಿ ಒಂದು ದೇಶ , ಒಂದೇ ಸಂಸ್ಕೃತಿ, ಒಂದೇ ಭಾಷೆ ಮುಂತಾದ ಪ್ರಾಚೀನ ಕಾಲದ ಅವ್ಯವಸ್ಥೆಗೆ ದೇಶವನ್ನು ದೂಡುವ ಪೂರ್ವನಿಯೋಜಿತ ಷಡ್ಯಂತರಗಳನ್ನು ಕೇಂದ್ರದ ಫಾಶಿಸ್ಟ್ ಸರ್ಕಾರ ತೆಗೆದುಕೊಂಡು ಹೋಗುವಾಗ ವಿವಿಧ ಭಾಷೆಗಳನ್ನು ಸಂವಿಧಾನಾತ್ಮಕವಾಗಿ ರೂಪೀಕರಿಸಿದ ದಿನವನ್ನು ಆಚರಿಸಲು ಏನೇ ಆದರೂ ಪ್ರತಿರೋಧವು ಹೋರಾಟದ ಅವಿಭಾಜ್ಯ ಅಂಗವಾಗಿದೆ ಎಂದು ಜೋನ್ಸನ್ ಕಂಡಂಚಿರ ಹೇಳಿದರು.

ಕ್ಷೇತ್ರದ ವಿವಿಧ ಪ್ರದೇಶಗಳಿಂದ  ಪ್ರಬಲ ಹತ್ತು ತಂಡಗಳನ್ನು ಆಯ್ಕೆ ಮಾಡಿ ಆಯೋಜಿಸಿದ ಏಕದಿನ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟದಲ್ಲಿ ಎಸ್.ಡಿ.ಪಿ.ಐ ಮಂಗಲ್ಪಾಡಿ ಪಂಚಾಯತ್ ಪ್ರಥಮ ಹಾಗೂ ಎಸ್.ಡಿ.ಪಿ.ಐ ಮಂಜೇಶ್ವರ ಪಂಚಾಯತ್ ತಂಡ ಎರಡನೇ ಸ್ಥಾನವನ್ನು ಗಳಿಸಿತು.

ಎಸ್.ಡಿ.ಪಿ.ಐ ಮಂಜೇಶ್ವರ ಮಂಡಲಾಧ್ಯಕ್ಷ ಅಶ್ರಫ್ ಬಡಾಜೆ ಅಧ್ಯಕ್ಷತ ವಹಿಸಿದ್ದರು. ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಮುಹಮ್ಮದ್ ಪಾಕ್ಯಾರ, ಜಿಲ್ಲಾ ಉಪಾಧ್ಯಕ್ಷ ಇಕ್ಬಾಲ್ ಹೊಸಂಗಡಿ, ಜಿಲ್ಲಾ ಕಾರ್ಯದರ್ಶಿ ಮುನೀರ್ ಎ.ಎಚ್, ಕ್ಷೇತ್ರ ಉಪಾಧ್ಯಕ್ಷ ಅಲಿ ಶಾಮ , ಮಂಜೇಶ್ವರ ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹಮೀದ್ ಹೊಸಂಗಡಿ, ಪಕ್ಷದ ಸಂಘಟನಾ ಕಾರ್ಯದರ್ಶಿ ಅನ್ಸಾರ್ ಗಾಂಧಿನಗರ, ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯ ರಹ್ಮಾನ್ ಉದ್ಯಾವರ, ಕುಂಬಳೆ ಗ್ರಾಮ ಪಂಚಾಯತ್ ಸದಸ್ಯ ಅನ್ವರ್ ಆರಿಕ್ಕಾಡಿ ಮುಂತಾದವರು ಮಾತನಾಡಿದರು.

ಸ್ವಾಗತ ಸಮಿತಿ ಅಧ್ಯಕ್ಷ ಶರೀಫ್ ಪಾವೂರ್ ಸ್ವಾಗತಿಸಿ ಕ್ಷೇತ್ರ ಕಾರ್ಯದರ್ಶಿ ಆರಿಫ್ ಖಾದರ್ ವಂದಿಸಿದರು.

Join Whatsapp