KSRTC ಬಸ್ ಗೆ ವಿಮಾನದ ರೆಕ್ಕೆ ಡಿಕ್ಕಿ: ಹಲವು ಮಂದಿ ಗಂಭೀರ

Prasthutha|

ತಿರುವನಂತಪುರಂ: ಸರ್ಕಾರಿ ಬಸ್ ಗೆ ವಿಮಾನದ ರೆಕ್ಕೆಗಳನ್ನು ಸಾಗಿಸುತ್ತಿದ್ದ ಟ್ರೇಲರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಿರುವನಂತಪುರಂನ ಬಲರಾಮಪುರಂ ಜಂಕ್ಷನ್ ಬಳಿ ನಡೆದಿದೆ.
ಟ್ರೈಲರ್ ಲಾರಿ ವಿಮಾನದ ರೆಕ್ಕೆಗಳನ್ನು ಹೈದರಾಬಾದ್ ಗೆ ಸಾಗಿಸುತ್ತಿತ್ತು. ಅದು ತಿರುವನಂತಪುರಂ ಕಡೆಗೆ ಬರುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಗೆ ಡಿಕ್ಕಿಯಾಗಿದೆ.
ಬಸ್ ನ ಒಂದು ಭಾಗ ಸಂಪೂರ್ಣ ಜಖಂಗೊಂಡಿದ್ದು, ವಿಮಾನದ ರೆಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಚಾಲಕ ಸೇರಿದಂತೆ ಐದಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Join Whatsapp