ಸುನ್ನತ್ ಕೆರೆಯಲ್ಲಿ ಎಸ್ ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಬಿರುಸಿನ ಪ್ರಚಾರ

Prasthutha|

ಬೆಳ್ತಂಗಡಿ: ವಿಧಾನಸಭಾ ಚುನಾವಣಾ ಕಣ ದಿನೇ ದಿನೆ ರಂಗು ಪಡೆದುಕೊಳ್ಳುತ್ತಿದೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕುವೆಟ್ಟು ಗ್ರಾಮ ವ್ಯಾಪ್ತಿಯ ಸುನ್ನತ್ ಕೆರೆಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಎಸ್ ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಪ್ರಚಾರ ಕಾರ್ಯ ನಡೆಸಿದರು.

- Advertisement -


ಸಾರ್ವಜನಿಕ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷರಾದ ಅನ್ವರ್ ಸಾದಾತ್ ಬಜತ್ತೂರು ಅವರು ಮಾತನಾಡಿ, ಭ್ರಷ್ಟ ಬಿಜೆಪಿಯ ದುರಾಡಳಿತದಿಂದ ರಾಜ್ಯದ ಜನ ಬೇಸತ್ತಿದ್ದು, ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳನ್ನು ತಿರಸ್ಕರಿಸಿ, ಜನಪರವಾದ ನಿಲುವಿನ ಎಸ್ ಡಿಪಿಐ ಪಕ್ಷಕ್ಕೆ ಅವಕಾಶ ಮಾಡಿಕೊಡಲಿದ್ದು, ಬೆಳ್ತಂಗಡಿ ಕ್ಷೇತ್ರ ಅಭಿವೃದ್ಧಿಯನ್ನು ಹೊಂದಲು, ಮತ್ತಷ್ಟು ಬೆಳಗಲು ಕ್ಷೇತ್ರದ ಜನತೆ ಅಕ್ಬರ್ ಬೆಳ್ತಂಗಡಿ ಅವರನ್ನು ಗೆಲ್ಲಿಸುವಂತೆ ಕರೆ ನೀಡಿದರು.


ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಮಾತನಾಡಿ, ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು, ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಸರಕಾರ, 40% ಕಮಿಷನ್ ಪಡೆದು ಇಲ್ಲಿ ಅಧಿಕಾರ ನಡೆಸುತ್ತಿದ್ದೆ. ಈ ಚುನಾವಣೆ ಜನತೆ ಬಿಜೆಪಿ ಗೆ ತಕ್ಕ ಪಾಠ ಕಲಿಸಲಿದ್ದಾರೆ, ಕ್ಷೇತ್ರದ ಜನರ ಸೇವೆ ಮಾಡಲು ಅವಕಾಶ ನೀಡುವಂತೆ ಕೋರಿಕೊಂಡರು.

- Advertisement -

ಬೆಳ್ತಂಗಡಿ ಕ್ಷೇತ್ರಾಧ್ಯಕ್ಷರಾದ ನವಾಝ್ ಕಟ್ಟೆ ಮಾತನಾಡಿ, ಬೆಳ್ತಂಗಡಿಯ ಸರ್ವಾಧಿಕಾರಿಯನ್ನು ಸೋಲಿಸೋಣ, ನ್ಯಾಯಕ್ಕಾಗಿ ದ್ವನಿಯೆತ್ತುವವರನ್ನು ಬೆಂಬಲಿಸೋಣ, ನಿರ್ಭೀತಿಯ ಬೆಳ್ತಂಗಡಿ, ನಮ್ಮೆಲ್ಲರ ಕನಸು. ಕ್ಷೇತ್ರದ ಅಭಿವೃದ್ಧಿಗಾಗಿ ಎಸ್ ಡಿಪಿಐ ಪಕ್ಷಕ್ಕೆ ಮತ ನೀಡಬೇಕಾಗಿ ಮತದಾರರಲ್ಲಿ ಮನವಿ ಮಾಡಿಕೊಂಡರು.