► ಒಂದೇ ಮೈತ್ರಿಕೂಟದಲ್ಲಿ ಒವೈಸಿಯ AIMIM, SDPI !
ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆಗೆ ನಿನ್ನೆಯಷ್ಟೇ ಎಸ್ಡಿಪಿಐ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ಕಮಲ್ ಹಾಸನ್ ಅವರ MNM ಪಕ್ಷ ಇಂದು ಆ ಮೈತ್ರಿಯನ್ನು ಕಡಿದುಕೊಂಡಿದೆ. MNM ಹಾಗೂ SDPI ನಡುವೆ ಇದ್ದ ಸೀಟು ಹಂಚಿಕೆ ವಿವಾದವೇ ಈ ಮೈತ್ರಿ ಮುರಿದು ಬೀಳಲು ಕಾರಣ ಎನ್ನಲಾಗಿದೆ.
ಆದರೆ ಆ ಮೈತ್ರಿ ಮುರಿದು ಬಿದ್ದ ಬೆನ್ನಲ್ಲೇ ಎಸ್ಡಿಪಿಐ ಪಕ್ಷವು ಟಿಟಿವಿ ದಿನಕರನ್ ಅವರ MMK ಪಕ್ಷದ ಜೊತೆಗೆ ಮೈತ್ರಿ ಏರ್ಪಡಿಸಿಕೊಂಡಿದೆ. ಆ ಮೈತ್ರಿಯಲ್ಲಿ ಇದೀಗಾಗಲೇ ಸಂಸದ ಅಸದುದ್ದೀನ್ ಒವೈಸಿಯವರ AIMIM ಕೂಡಾ ಇದೆ ಎನ್ನುವುದು ಗಮನಾರ್ಹವಾಗಿದೆ. ಒವೈಸಿ ಪಕ್ಷಕ್ಕೆ 3 ಸೀಟುಗಳನ್ನು ಬಿಟ್ಟುಕೊಟ್ಟಿರುವ MMK ಪಕ್ಷ, ಎಸ್ಡಿಪಿಐಗೆ 6 ಸೀಟುಗಳನ್ನು ಮೈತ್ರಿ ಕರಾರಿನ ಪ್ರಕಾರ ಬಿಟ್ಟುಕೊಟ್ಟಿದೆ. ಹೀಗಾಗಿ MMK, AIMIM ಮತ್ತು SDPI ಒಟ್ಟಾಗಿ ಒಂದೇ ವೇದಿಕೆಯಲ್ಲಿ ಚುನಾವಣೆ ಎದುರಿಸಲಿದೆ.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಬಿಜೆಪಿ ಕೂಡಾ ಎಸ್ಡಿಪಿಐ ಜೊತೆಗಿನ ಮೈತ್ರಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಟೀಕಿಸಿತ್ತು. ಬಿಜೆಪಿ ಜಪ ಮಾಡುವ ಕೆಲ ಮಾಧ್ಯಮಗಳೂ ಕಮಲ್ ಪಕ್ಷದೊಂದಿಗಿನ ಮೈತ್ರಿಯನ್ನು ತೀಕ್ಷ್ಣವಾಗಿ ವಿರೋಧಿಸಿತ್ತು.. ಮಾತ್ರವಲ್ಲ ಹಲವು ನಕಾರಾತ್ಮಕವಾದಂತಹಾ ಆಧಾರ ರಹಿತ ಸುದ್ದಿಗಳನ್ನು ತೇಲಿ ಬಿಟ್ಟಿತ್ತು.