ನವದೆಹಲಿ: ಆಗಸ್ಟ್ ತಿಂಗಳಿನಲ್ಲಿ ಭಾರತೀಯರಲ್ಲಿ 15 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಸಿಎಂಐಇ-ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಸಂಸ್ಥೆಯು ಹೇಳಿದೆ.
ಜುಲೈನಲ್ಲಿ 39.938 ಕೋಟಿ ಇದ್ದ ಉದ್ಯೋಗಾವಕಾಶವು ಆಗಸ್ಟ್ ನಲ್ಲಿ 39.778 ಕೋಟಿಗೆ ಇಳಿದಿದ್ದು, ಗ್ರಾಮೀಣ ಭಾಗದಲ್ಲಿ 13 ಲಕ್ಷ ಉದ್ಯೊಗಗಳು ನಷ್ಟಗೊಂಡಿರುವುದು ಗಮನಾರ್ಹವಾಗಿದೆ.
ಭಾರತದ ನಿರುದ್ಯೋಗ ಮಟ್ಟವು ಜುಲೈಯಲ್ಲಿ 6.95% ಇದ್ದುದು ಆಗಸ್ಟ್ ನಲ್ಲಿ 8.32 ಶೇಕಡಾಕ್ಕೆ ಏರಿಕೆ ಆಗಿದೆ. ದೆಹಲಿ, ಹರಿಯಾಣ, ರಾಜಸ್ತಾನಗಳಲ್ಲಿ ನಿರುದ್ಯೋಗ ಪ್ರಮಾಣವು ಶೇಕಡಾ ಎರಡಂಕಿಯ ದಾಟಿ ಇರುವುದಾಗಿ ತಿಳಿದು ಬಂದಿದೆ.