ಪ್ಯಾರಾಲಿಂಪಿಕ್ಸ್‌| ಭಾರತಕ್ಕೆ ಮೂರನೇ ಚಿನ್ನ: ಮನೀಶ್, ಸಿಂಗ್ ರಾಜ್ ಗೆ ಪದಕ

Prasthutha|

ಟೋಕಿಯೊ: ಭಾರತ ದಿನದ ಆರಂಭದಲ್ಲೇ ಎರಡು ಪದಕ ಬಾಚಿಕೊಂಡಿದೆ. P4​​​ ಮಿಶ್ರ 50 ಮೀಟರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮನೀಶ್ ನರ್ವಾಲ್ ಚಿನ್ನಕ್ಕೆ ಮತ್ತು ಸಿಂಗ್​ ರಾಜ್​ ಬೆಳ್ಳಿಗೆ ಮುತ್ತಿಕ್ಕಿದ್ದಾರೆ.
ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ ನಲ್ಲಿ ಭಾರತೀಯ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ಮುಂದುವರಿಸುತ್ತಿದ್ದಾರೆ.

- Advertisement -

ಇಂದು ಭಾರತ ದಿನದ ಆರಂಭದಲ್ಲೇ ಎರಡು ಪದಕ ಬಾಚಿಕೊಂಡಿದ್ದು, P4​​​ ಮಿಶ್ರ 50 ಮೀಟರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮನೀಶ್ ನರ್ವಾಲ್ ಚಿನ್ನಕ್ಕೆ ಮತ್ತು ಸಿಂಗ್​ರಾಜ್​ ಬೆಳ್ಳಿಗೆ ಮುತ್ತಿಕ್ಕಿದ್ದಾರೆ.

ಇದಕ್ಕೂ ಮುನ್ನ ನಡೆದ ಸೆಮಿ ಫೈನಲ್ ​ನಲ್ಲಿ ಶೂಟಿಂಗ್ ಪಿ4 50 ಮೀಟರ್ ಪಿಸ್ತೂಲ್ ಎಸ್ ಹೆಚ್ 1 ವಿಭಾಗದಲ್ಲಿ ಮನೀಶ್ 533-7x ಮತ್ತು ಸಿಂಗರಾಜ್ 536-4x ಅಂಕಗಳೊಂದಿಗೆ ಫೈನಲ್ ಪ್ರವೇಶಿಸಿದ್ದರು. ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಬಾಚಿದ ಪದಕಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 3 ಚಿನ್ನ, 7 ಬೆಳ್ಳಿ ಮತ್ತು 5 ಕಂಚಿನ ಪದಕಗಳಾಗಿವೆ.

- Advertisement -

ಬ್ಯಾಡ್ಮಿಂಟನ್ ಪುರುಷರ ಎಸ್‌ಎಲ್3 ವಿಭಾಗದಲ್ಲಿ ವಿಶ್ವ ನಂ.1 ಆಟಗಾರರೂ ಆದ ಭಾರತದ ಪ್ರಮೋದ್ ಭಗತ್ ಫೈನಲ್‌ ಗೆ ಲಗ್ಗೆಯಿಟ್ಟಿದ್ದಾರೆ. ಪುರುಷರ ಸಿಂಗಲ್ಸ್ ಎಸ್ ಎಲ್ 3 ಸೆಮಿ ಫೈನಲ್ ನಲ್ಲಿ ಪ್ರಮೋದ ಭಗತ್ ಜಪಾನ್ ನ ಡೈಸುಕೆ ಫುಜಿಹಾರ ಅವರನ್ನು 21-11, 21-16 ರಿಂದ ಸೋಲಿಸಿದ್ದರು. ಫೈನಲ್ ಗೆ ಹೆಜ್ಜೆ ಇಟ್ಟಿರುವ ಭಗತ್ ದೇಶಕ್ಕೆ ಬೆಳ್ಳಿ ಪದಕದ ಭರವಸೆ ಮೂಡಿಸಿದ್ದಾರೆ.

Join Whatsapp