ಕೋವಿಡ್ ನಿಂದ ಮುಚ್ಚಲ್ಪಟ್ಟ ಶಾಲೆಗಳನ್ನು ಮತ್ತೆ ತೆರೆಯಲು ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂ ಕೋರ್ಟಿನಲ್ಲಿ ವಜಾ

Prasthutha|

ಹೊಸದಿಲ್ಲಿ: ಕೋವಿಡ್ ಬಿಕ್ಕಟ್ಟಿನಿಂದಾಗಿ ದೇಶದಾದ್ಯಂತ ಮುಚ್ಚಲ್ಪಟ್ಟ ಶಾಲೆಗಳನ್ನು ಮತ್ತೆ ತೆರೆಯಲು ಕೋರಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು(ಸೋಮವಾರ) ತಿರಸ್ಕರಿಸಿದೆ.

“ಈ ಸಮಸ್ಯೆಗಳು ಗಂಭೀರ ಸಂಕೀರ್ಣತೆಯಿಂದ ತುಂಬಿವೆ. ಇಂತಹಾ ಸಮಸ್ಯೆಗಳಿಗೆ ನ್ಯಾಯಾಂಗವೇ ಆದೇಶಿಸಬೇಕೆಂದಿಲ್ಲ” ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಬಿ.ವಿ.ನಾಗರತ್ನಾ ಅವರನ್ನೊಳಗೊಂಡ ಪೀಠವು ದೆಹಲಿಯ 12 ನೇ ತರಗತಿ ವಿದ್ಯಾರ್ಥಿಯಾದ ಅರ್ಜಿದಾರನಿಗೆ ಮನವಿಯನ್ನು ಹಿಂತೆಗೆದುಕೊಳ್ಳಲು ಕೇಳಿ ಕೊಂಡಿದೆ. ಅಧ್ಯಯನಕ್ಕಾಗಿ ಸಮಯವನ್ನು ಕಳೆಯಲು ತನ್ನ ಕಕ್ಷಿದಾರರಿಗೆ ಸಲಹೆ ನೀಡುವಂತೆ ಅರ್ಜಿದಾರರ ಪರ ಹಾಜರಾದ ವಕೀಲ ಆರ್ ಪಿ ಮೆಹ್ರೋತ್ರಾಗೆ ನ್ಯಾಯಾಲಯ ಸಲಹೆ ನೀಡಿದೆ.

- Advertisement -

- Advertisement -