ಚೊಕ್ಕಬೊಟ್ಟು ಬ್ರದರ್ಸ್ ವತಿಯಿಂದ ‘ಶಾಲೆರೋ ಗ್ರೌಂಡ್ ಲ್ ಒರು ನಾಲ್’ ವಿಶೇಷ ಕಾರ್ಯಕ್ರಮ

Prasthutha|

ಸುರತ್ಕಲ್: ಚೊಕ್ಕಬೊಟ್ಟು ಬ್ರದರ್ಸ್ ವತಿಯಿಂದ “ಶಾಲೆರೋ ಗ್ರೌಂಡ್ ಲ್ ಒರು ನಾಲ್ “ ಎಂಬ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿತ್ತು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವಾಝ್ ಚೊಕ್ಕಬೆಟ್ಟು ವಹಿಸಿದರು. ಖತೀಬ್ ಅಬ್ದುಲ್ ಅಝೀಝ್ ದಾರಿಮಿ ದುಆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

8ವರ್ಷದ ಒಳಗಿನ ಮಕ್ಕಳಿಗೆ ಕ್ರೀಡೆ ಮತ್ತು 8ರಿಂದ10 ಹಾಗೂ 11ರಿಂದ14 ವರ್ಷದ ಮಕ್ಕಳಿಗೆ ವಿವಿಧ ರೀತಿಯ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. 50ವರ್ಷ ಮೇಲ್ಪಟ್ಟ ಹಿರಿಯರಿಗೆ ವಿಶೇಷ ಕ್ರೀಡೆ ಏರ್ಪಡಿಸಲಾಗಿತ್ತು.
15 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಿಗೆ ಗ್ರೂಪ್ ಪಂದ್ಯ ಕಬಡ್ಡಿ ಪಂದ್ಯದಲ್ಲಿ ಓಶಿಯನ್ ವಿನ್ನರ್ ಆದರೆ ಎಸ್ ಎಸ್ ರನ್ನರ್ ಆದರು. ಹಾಂಡ್ ಬಾಲ್ ಪಂದ್ಯಾಟ ಆಝಾದ್ ಮತ್ತು ನ್ಯೂ ಸ್ಟಾರ್. ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಎಸ್ ಎಸ್ ಮತ್ತು ಟೀಮ್ ಕಟ್ಟೆ ತಂಡ ವಿಜೇತ ರಾದರು. ಚಾಂಪಿಯನ್ ಆಗಿ ಎಸ್ ಎಸ್ ತಂಡ ಆಯ್ಕೆಯಾದರು.

- Advertisement -

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ನಿವೃತ್ತ ಮುಖ್ಯೋಪಾಧ್ಯಾಯ ವಾಸುದೇವ ರಾವ್ ಅವರನ್ನು ಈ ವೇಳೆ ಸನ್ಮಾನಿಸಲಾಯಿತು.

ಮರ್ಹೂಮ್ ಇಬ್ರಾಹೀಂ ತಣ್ಣಿರುಬಾವಿ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಅಬೂಬಕ್ಕರ್ ಕುಳಾಯಿ, ಕಮಲ್ ಹುಸೈಲ್, ಪೊಲೀಸ್ ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಬಶೀರ್, ಅತಿ ಹೆಚ್ಚು ರಕ್ತದಾನ ಮಾಡಿದ ಮುಹಮ್ಮದ್ ಅಝರ್ ಚೊಕ್ಕಬೆಟ್ಟು, ದೈಹಿಕ ಶಿಕ್ಷಕ ಉಮೇಶ್, ಸಾಮಾಜಿಕ ಕಾರ್ಯಕರ್ತ ದಾವೂದ್ ನೌಶಾದ್.ಮತ್ತು ಮುಹಮ್ಮದ್ ಶಿಫಕ್ ಅವರನ್ನು ಸನ್ಮಾನಿಸಲಾಯಿತು.

ಇದೇ ವೇಳೆ ಸಂಘಟನೆಯ ಲೋಗೋವನ್ನು ಅನಾವರಣಗೊಳಿಸಲಾಯಿತು.

800


Join Whatsapp