ರೈಲ್ವೆ ನಿಲ್ದಾಣದಲ್ಲಿ ಕಾಣೆಯಾಗಿದ್ದ ಮಗು ಬಿಜೆಪಿ ನಾಯಕನ ಮನೆಯಲ್ಲಿ ಪತ್ತೆ: ಮಕ್ಕಳ ಕಳ್ಳಸಾಗಣೆ ಜಾಲ ಭೇದಿಸಿದ ಪೊಲೀಸರು

Prasthutha|

ಲಕ್ನೋ: ಕಳೆದ ವಾರ ರೈಲ್ವೆ ನಿಲ್ದಾಣದಲ್ಲಿ ಪೋಷಕರೊಂದಿಗೆ ಮಲಗಿದ್ದಾಗ ಕಾಣೆಯಾಗಿದ್ದ ಏಳು ತಿಂಗಳ ಮಗು ಬಿಜೆಪಿಯ ಕಾರ್ಪೊರೇಟರೊಬ್ಬರ ಮನೆಯಲ್ಲಿ ಪತ್ತೆಯಾಗಿದ್ದಾರೆ.

- Advertisement -

 ಫಿರೋಝಾಬಾದ್ ಬಿಜೆಪಿ ಕಾರ್ಪೊರೇಟರ್ ವಿನಿತಾ ಅಗರ್ವಾಲ್ ಅವರ ಮನೆಯಲ್ಲಿ ಮಗು ಪತ್ತೆಯಾಗಿದ್ದು, ಮಕ್ಕಳ ಕಳ್ಳಸಾಗಣೆ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.

ಬಿಜೆಪಿಯ ವಿನಿತಾ ಅಗರ್ವಾಲ್ ಮತ್ತು ಅವರ ಪತಿ ಮಕ್ಕಳ ಕಳ್ಳಸಾಗಣೆ ಗ್ಯಾಂಗ್ ಭಾಗವಾಗಿದ್ದ ಇಬ್ಬರು ವೈದ್ಯರಿಂದ 1.8 ಲಕ್ಷ ರೂ.ಗಳಿಗೆ ಈ ಮಗುವನ್ನು ಖರೀದಿಸಿದ್ದರು ಎಂದು ಆರೋಪಿಸಲಾಗಿದೆ. ಈ ದಂಪತಿಗೆ ಈಗಾಗಲೇ ಒಬ್ಬ ಮಗಳಿದ್ದಾಳೆ. 

- Advertisement -

ಪ್ಲಾಟ್ ಫಾರ್ಮ್ ನಿಂದ ಮಗುವನ್ನು ಎತ್ತಿಕೊಂಡಾಗ ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾದ ವ್ಯಕ್ತಿ ಸೇರಿದಂತೆ ಒಟ್ಟು ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಮಥುರಾದಲ್ಲಿ ರೈಲ್ವೆ ಪೊಲೀಸರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಪೊಲೀಸರು ಮಗುವನ್ನು ತಾಯಿಗೆ ಹಸ್ತಾಂತರಿಸಿದರು.

ಹಣಕ್ಕಾಗಿ ಕಳ್ಳಸಾಗಣೆಯಲ್ಲಿ ತೊಡಗಿರುವ ಗ್ಯಾಂಗ್ ಈ ಮಗುವನ್ನು ಅಪಹರಿಸಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ಮುಹಮ್ಮದ್ ಮುಷ್ತಾಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Join Whatsapp