ಅಪಘಾತಕ್ಕೀಡಾದ ಶಾಲಾ ಬಸ್‌; ಅಪಾಯದಿಂದ ಪಾರಾದ ವಿದ್ಯಾರ್ಥಿಗಳು

Prasthutha|

ಶಿವಮೊಗ್ಗ: ಶಾಲಾ ಬಸ್‌ ಗೆ ಮಿನಿ ಲಗೇಜ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬಸ್ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾದ ಘಟನೆ ಆನಂದಪುರ ಸಮೀಪದ ಮುಂಬಾಳು ಗ್ರಾಮದ ಬಳಿ ನಡೆದಿದೆ. ಬಸ್‌ನಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.

- Advertisement -

ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯಲು ಬಸ್ ಅನ್ನು ಮುಂಬಾಳು ಗ್ರಾಮದ ಬಳಿ ನಿಲ್ಲಿಸಲಾಗಿತ್ತು. ಈ ವೇಳೆ  ಶಿವಮೊಗ್ಗದ ಕಡೆಯಿಂದ ಬಂದ ಮಿನಿ ಲಗೇಜ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ.

ವಾಹನದಲ್ಲಿ 24 ವಿದ್ಯಾರ್ಥಿಗಳು ಇದ್ದರು ಎಂದು ತಿಳಿದುಬಂದಿದೆ. ಶಾಲಾ ವಾಹನದ ಡ್ರೈವರ್‌ಗೆ ಸಣ್ಣಪುಟ್ಟ ಗಾಯಾಗಳಾಗಿವೆ. ಲಗೇಜ್ ವಾಹನದ ಡ್ರೈವರ್ ವಾಹನ ಬಿಟ್ಟು ಪರಾರಿಯಾಗಿದ್ದು, ಪೋಲಿಸರು ವಾಹನವನ್ನು ವಶಕ್ಕೆ ಪಡೆದಿದ್ದಾರೆ.

Join Whatsapp