ಬಿಜೆಪಿಯೊಂದಿಗೆ ಹೊಂದಾಣಿಕೆಗೆ ಮುಂದಾದರೆ ಶಿವಸೇನೆಯನ್ನು ಪುನರ್ ಸಂಘಟಿಸುತ್ತೇವೆ; ಬಂಡಾಯ ಶಾಸಕ

Prasthutha|

ಮುಂಬೈ: ಉದ್ಧವ ಠಾಕ್ರೆ ಅವರು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾಗಲಿ ಮತ್ತು ನಾವು ಶಿವಸೇನೆಯನ್ನು ಪುನರ್ ಸಂಘಟಿಸುತ್ತೇವೆ ಎಂದು ಬಂಡಾಯ ಶಾಸಕ ಏಕನಾಥ್ ಶಿಂಧೆ ತಿಳಿಸಿದ್ದಾರೆ.

- Advertisement -

ಮಹಾರಾಷ್ಟ್ರದಲ್ಲಿ ವಿಶ್ವಾಸಮತ ನಡೆಸುವಂತೆ ಸಂಸದ ಸಂಜತ್ ರಾವತ್ ಅವರನ್ನು ಆಗ್ರಹಿಸಿದ ಶಿಂಧೆ, ನಾವು ಇಟ್ಟ ಹೆಜ್ಜೆ ಹಿಂದೆ ತೆಗೆಯೋದಿಲ್ಲ. ಪ್ರಸಕ್ತ ಚಾಲ್ತಿಯಲ್ಲಿರುವ ಮೈತ್ರಿಯನ್ನು ಮುರಿದು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಲು ಉದ್ಧವ್ ಠಾಕ್ರೆ ಮುಂದಾಗಲಿ ಎಂದು ಸೂಚಿಸಿದ್ದಾರೆ.

ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, ಉದ್ಧವ್ ಠಾಕ್ರೆ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಎಲ್ಲಾ ಬಂಡಾಯ ಶಾಸಕರು ಸದನದ ಮಹಡಿಗೆ ಬರಲಿ. ನಾವು ಅವರನ್ನು ನೋಡಿಕೊಳ್ಳುತ್ತೇವೆ. ಇನ್ನು ಮುಂದಕ್ಕೆ ಅವರಿಗೆ ಮಹಾರಾಷ್ಟ್ರದಲ್ಲಿರಲು ಕಷ್ಟವಾಗಲಿದೆ ಎಂದು ತಿಳಿಸಿದ್ದಾರೆ.



Join Whatsapp