ಬಂಟ್ವಾಳ: ಗೂಡಿನಬಳಿ ವೆಲ್ಫೇರ್ ಅಸೋಸಿಯೇಶನ್ ಸೌದಿ ಅರೇಬಿಯಾ – ಸಮನ್ವಯ ಸಮಿತಿ ಇದರ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಮಾರ್ಗದರ್ಶನ ಶಿಬಿರ ಗೂಡಿನಬಳಿಯ ಜಿ. ಎಂ. ರೆಸಿಡೆನ್ಸಿಯಲ್ಲಿ ಶನಿವಾರದಂದು ನಡೆಯಿತು.
ಸಂಸ್ಥೆಯ ಚೇಯರ್ ಮೆನ್ ರಾದ ಜಿ.ಕೆ.ಮುಹಮ್ಮದ್ ಸಲೀಂ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಮಾಸ್ಟರ್ ಅಲೀ ರಿಜ್ವಾನ್ ಜಿ.ಕೆ ಕಿರಾಅತ್ ಪಠಿಸಿದರು. ಮಸ್ಜಿದ್-ಎ-ಮುತ್ತಲಿಬ್ ಗೂಡಿನಬಳಿ ಇದರ ಖತೀಬರಾದ ಅಶ್ರಫ್ ಫೈಝಿ ದುವಾ ಆರ್ಶಿವಾಚನಗೈದರು.
ಸಮನ್ವಯ ಸಮಿತಿಯ ಅಧ್ಯಕ್ಷರಾದ ಜಿ.ಎಂ ಅನ್ವರ್ ಹುಸೈನ್ ಸ್ವಾಗತ ಭಾಷಣ ಮಾಡಿದರು.
ಸ್ಥಳೀಯ ಕಾಲೇಜಿನ ಪ್ರಾಂಶುಪಾಲರಾದ ಯೂಸುಫ್ ಅವರು ಕಾರ್ಯಕ್ರಮವನ್ನು ಉದ್ಫಾಟಿಸಿದರು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರಫೀಕ್ ಮಾಸ್ಟರ್ ರವರು ಹಿತವಚನ ನುಡಿದರು. “ಮಕ್ಕಳು ಬಾಲ್ಯದಲ್ಲಿ ಪುಸ್ತಕವನ್ನು ತಲೆ ತಗ್ಗಿಸಿ ಓದಿದರೆ ಮುಂದಕ್ಕೆ ಅವರನ್ನು ತಲೆ ಎತ್ತುವಂತೆ ಮಾಡುತ್ತದೆ. ಹಾಗೆಯೇ ಮೊಬೈಲ್ ಳನ್ನು ತಲೆ ತಗ್ಗಿಸಿ ನೋಡಿದರೆ ಮುಂದೆ ತಲೆ ಎತ್ತದಂತೆ ಮಾಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಕಿವಿಮಾತನ್ನು ಹೇಳಿದರು”.
ಊರಿನ ಸುಮಾರು 40 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಸ್ಮರಣ ಸಂಚಿಕೆಯನ್ನು ನೀಡಿ ಗೌರವಿಸಲಾಯಿತು. ಮತ್ತು ಸ್ಥಳೀಯ ಪದವಿ ಪೂರ್ವ ಕಾಲೇಜಿನ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಅಧಿಕ ಅಂಕಗಳಿಸಿರುವ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಕೇಂದ್ರ ಸಮಿತಿ ಅಧ್ಯಕ್ಷರಾದ ಅಬ್ದುಲ್ ಅಝೀಝ್, ಉಪಾಧ್ಯಕ್ಷರಾದ ಜಿ.ಕೆ ರಿಝ್ವಾನ್, ಬಿ.ಎ. ಆಸೀಫ್, ಕಾರ್ಯದರ್ಶಿ ಜಿ.ಕೆ ಜೌಹಾರ್, ಕೋಶಾಧ್ಯಾಕ್ಷ ಜಿ.ಎಂ ಅಮೀರ್ ಹುಸೈನ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಸಮನ್ವಯ ಸಮಿತಿಯ ಕಾರ್ಯದರ್ಶಿಯರಾದ ಜಿ.ಕೆ ಅಬ್ದುಲ್ ರಶೀದ್ ಕೋಟಿಹಿತ್ತಿಲು ಹಾಗೂ ಜಿ.ಕೆ ಅತಾವುಲ್ಲಾ ಕಾರ್ಯಕ್ರಮವನ್ನು ನಿರೂಪಿಸಿದರು.