►ವಿದ್ಯಾರ್ಥಿಗಳ ಪರ ಮೊಹಮ್ಮದ್ ತಾಹಿರ್ ವಾದ ಮಂಡನೆ
ಬೆಂಗಳೂರು : ರಾಜ್ಯದ ಕಾಲೇಜುಗಳಲ್ಲಿ ತಲೆದೋರಿರುವ ಸ್ಕಾರ್ಫ್ ಮತ್ತು ಕೇಸರಿ ವಿಚಾರಗಳ ಕುರಿತಂತೆ ರಾಜ್ಯ ಹೈಕೋರ್ಟಿನಲ್ಲಿ ಹಾಕಿರುವ ರಿಟ್ ಅರ್ಜಿಯ ವಿಚಾರನೆ ಇಂದು ಆರಂಭವಾಗಿದೆ. ವಿದ್ಯಾರ್ಥಿಗಳ ಪರ ಮೊಹಮ್ಮದ್ ತಾಹಿರ್ ಅವರು ತಮ್ಮ ವಾದ ಮಂಡಿಸಿದರು. ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಸರ್ಕಾರ ಹೊಸ ನೀತಿ ರೂಪಿಸಲಿ. ಅಲ್ಲಿಯವರೆಗೆ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಅವಕಾಹ್ಸ ನೀಡುವಂತೆ ಕೋರಿ ಅವರು ವಾದ ಮಂಡಿಸಿದರು. ಸರ್ಕಾರ ಹೊಸ ನೀತಿ ರೂಪಿಸುವ ವರೆಗೆ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಿ ತಾಹಿರ್ ಅವರು ಮನವಿ ಮಾಡಿದರು.
ನ್ಯಾಯಮೂರ್ತಿ ಎ ಎಸ್ ದೀಕ್ಷಿತ್ ಅವರಿರುವ ಏಕಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸುತ್ತಿದೆ.