ದೆಹಲಿ ಎಂಬಿಎ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಆರೋಪಿ ಬಂಧನ

Prasthutha|

ಹೊಸದಿಲ್ಲಿ: ಎಂಬಿಎ ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ, ಬಂದೂಕು ತೋರಿಸಿ ಆತನ ನಗ್ನ ವೀಡಿಯೋ ಚಿತ್ರೀಕರಿಸಿ ಬ್ಲಾಕ್ ಮೇಲ್ ಮಾಡಿದ್ದ ವ್ಯಕ್ತಿಯೊಬ್ಬನನ್ನು  ಬಂಧಿಸಲಾಗಿದೆ. ಮತ್ತಿಬ್ಬರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

- Advertisement -

ದಕ್ಷಿಣ ದೆಹಲಿಯಲ್ಲಿ ನೆಲೆಸಿರುವ ವಿದ್ಯಾರ್ಥಿಯೊಬ್ಬ  ಫಿನೈಲ್ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರಿಂದ ಈ ವಿಷಯ ಬೆಳಕಿಗೆ ಬಂದಿತ್ತು.

ಆರೋಪಿಗಳಲ್ಲಿ ಒಬ್ಬ ಮೃತ ವಿದ್ಯಾರ್ಥಿಯೊಂದಿಗೆ ಸ್ನೇಹ ಬೆಳೆಸಿದ್ದ ಎನ್ನಲಾಗಿದೆ. ಅಕ್ಟೋಬರ್ 23 ಅವರು ವಿದ್ಯಾರ್ಥಿಯನ್ನು ಅಪಹರಿಸಿ, ಕೋಣೆಗೆ ಕರೆದೊಯ್ದು, ಬಂದೂಕು ತೋರಿಸಿ ಅವನ ನಗ್ನ ವೀಡಿಯೊವನ್ನು ಚಿತ್ರೀಕರಿಸಿದ್ದರು. ಮಾತ್ರವಲ್ಲ ಗಾಂಜಾ, ಚರಸ್ ಮತ್ತು ಪಿಸ್ತೂಲ್ ಅನ್ನು ಆತನ ಬಳಿ ಇಟ್ಟು ವೀಡಿಯೊವನ್ನು ಮಾಡಿದ್ದಾರೆ. ನಂತರ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ  20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ.

- Advertisement -

ಸಂತ್ರಸ್ತ ಕುಟುಂಬವು  5 ಲಕ್ಷ ರೂ.ಪಾವತಿಸಿದ ನಂತರವೂ ಆರೋಪಿಯು ವಿದ್ಯಾರ್ಥಿಯ ನಗ್ನ ವೀಡಿಯೋವನ್ನು ತನ್ನ ಕಾಲೋನಿಯಲ್ಲಿ ಮತ್ತು ಅವನ ಸಂಬಂಧಿಕರು ಮತ್ತು ಸ್ನೇಹಿತರಲ್ಲಿ ಪ್ರಸಾರ ಮಾಡುತ್ತಿದ್ದನು. ಫೆಬ್ರವರಿ 1 ರಂದು, ಹಣ ನೀಡದಿದ್ದರೆ ವಿದ್ಯಾರ್ಥಿ ಮತ್ತು ಅವನ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ವಿದ್ಯಾರ್ಥಿಯು ಪೊಲೀಸರಿಗೆ ಲಿಖಿತ ದೂರು ನೀಡಿದ್ದಾನೆ. ಆದರೆ ಪೊಲೀಸ್ ಪೇದೆ ಧರಂಪಾಲ್ ಅವರಿಗೆ ಆರೋಪಿಯು ಬೆದರಿಕೆ ಹಾಕಲು ಆರಂಭಿಸಿದ್ದನು. ಇದರಿಂದ ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳಲು ಫಿನೈಲ್ ಕುಡಿದಿದ್ದಾನೆ.

ವಿದ್ಯಾರ್ಥಿಯ ದೂರಿನ ಮೇರೆಗೆ ಭಾನುವಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರಮುಖ ಆರೋಪಿಯನ್ನು ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಂಡ ನಂತರ ಆತನನ್ನು ಬಂಧಿಸಲಾಯಿತು. ಘಟನೆಯಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp