ಇಶ್ರತ್ ಜಹಾನ್ ಪ್ರಕರಣ: ತನಿಖಾಧಿಕಾರಿ ವಜಾಕ್ಕೆ ಸುಪ್ರೀಮ್ ಕೋರ್ಟ್ ತಡೆ

Prasthutha|

ಅಹಮದಾಬಾದ್: 2004ರಲ್ಲಿ ಅಹಮದಾಬಾದ್ ನಲ್ಲಿ ನಡೆದ ನಕಲಿ ಎನ್ ಕೌಂಟರ್ ನಲ್ಲಿ ಇಶ್ರತ್ ಜಹಾನ್ ಸೇರಿದಂತೆ ಇತರ ಮೂವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ಸತೀಶ್ ಚಂದ್ರ ವರ್ಮಾ ಅವರನ್ನು ವಜಾಗೊಳಿಸುವ ಪ್ರಕ್ರಿಯೆಯನ್ನು ಸುಪ್ರೀಮ್ ಕೋರ್ಟ್ ಒಂದು ವಾರ ಕಾಲ ತಡೆಹಿಡಿದಿದೆ.

- Advertisement -

ಸೆಪ್ಟೆಂಬರ್ 7 ರಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರದ ತೀರ್ಮಾನವನ್ನು ಎತ್ತಿಹಿಡಿದ ಬಳಿಕ ವರ್ಮಾ ಅವರು, ತನ್ನನ್ನು ವಜಾಗೊಳಿಸುವಿಕೆಯ ಆದೇಶವನ್ನು ಸುಪ್ರೀಮ್ ಕೋರ್ಟ್’ನಲ್ಲಿ ಪ್ರಶ್ನಿಸಿದ್ದಾರೆ. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಮ್ ಕೋರ್ಟ್, ಅದರ ಅನುಷ್ಠಾನವನ್ನು ಒಂದು ವಾರದ ಕಾಲ ಮುಂದೂಡಿದೆ.

ಇಶ್ರತ್ ಜಹಾನ್ ಪ್ರಕರಣದ ತನಿಖಾಧಿಕಾರಿ ವರ್ವಾ ಅವರನ್ನು ನಿವೃತ್ತಿಯ ಒಂದು ತಿಂಗಳ ಮೊದಲು ಕೇಂದ್ರ ಸರ್ಕಾರ ಆಗಸ್ಟ್ 30ರಂದು ಕರ್ತವ್ಯದಿಂದ ವಜಾಗೊಳಿಸಿತ್ತು.

Join Whatsapp