ಅದಾನಿ, ಹಿಂಡೆನ್ ಬರ್ಗ್ ವರದಿ ಪ್ರಕಟಿಸದಂತೆ ಮಾಧ್ಯಮಗಳಿಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್

Prasthutha|

ನವದೆಹಲಿ: ಹಿಂಡೆನ್ ಬರ್ಗ್ ಮತ್ತು ಅದಾನಿ ಬಗ್ಗೆ ಪತ್ರಿಕೆಗಳು ವರದಿ ಮಾಡದಂತೆ ತಡೆ ನೀಡುವುದು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

- Advertisement -


ಆ ಸಂಬಂಧದ ಅರ್ಜಿ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಹೇಳಿದೆ.


ಅದಾನಿ ಗುಂಪುಗಳ ಅವ್ಯವಹಾರಗಳ ಬಗ್ಗೆ ಹಿಂಡೆನ್ ಬರ್ಗ್ ಮಾಡುತ್ತಿರುವ ವರದಿಗಳನ್ನು ಮುದ್ರಿಸದಂತೆ ಮಾಧ್ಯಮಗಳಿಗೆ ಸೂಚಿಸುವುದು ಸಾಧ್ಯವಿಲ್ಲ; ಮಾಧ್ಯಮಗಳನ್ನು ಹಾಗೆ ಮಾಡುವಂತೆ ತಡೆಯುವುದು ಅತಿಯಾದುದಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿತು. ಇದು ನ್ಯಾಯಾಲಯ ಗಮನಿಸಲೇ ಬೇಕಾದ ವಿಚಾರ ಎಂದು ವಕೀಲ ಎಂ. ಎಲ್. ಶರ್ಮಾ ಹೇಳಿದರು.

- Advertisement -


“ನಾವು ಯಾವುದೇ ಮಾಧ್ಯಮಕ್ಕೆ ಸುದ್ದಿ ತಡೆಗೆ ಇಂಜೆಕ್ಷನ್ ನೀಡುವುದಿಲ್ಲ. ನಾವು ಅಂತಿಮ ತೀರ್ಪು ಬೇಗನೆ ನೀಡುವೆವು” ಎಂದು ಸಿಜೆಐ ಚಂದ್ರಚೂಡ್ ಹೇಳಿದರು. ಮಾಧ್ಯಮಗಳು ತೀವ್ರ ಸಂವೇದನೆಯನ್ನು ಹುಟ್ಟು ಹಾಕುತ್ತಿವೆ ಎಂದು ವಕೀಲ ಶರ್ಮಾ ಮತ್ತೆ ಹೇಳಿದರು. “ಯಾವುದಾದರೂ ತರ್ಕಬದ್ಧ ವಿಚಾರ ಹೇಳಿ, ಇಂಜೆಕ್ಷನ್ ಕೇಳಬೇಡಿ” ಎಂದು ಸಿಜೆಐ ಸ್ಪಷ್ಟಪಡಿಸಿದರು.
ಮಾಧ್ಯಮ ವರದಿಗಳು ಭಾರತೀಯ ಷೇರು ಮಾರುಕಟ್ಟೆಯ ಮೇಲೆ ವಿಪರೀತ ಪರಿಣಾಮ ಬೀರುತ್ತಿವೆ. ಹೂಡಿಕೆದಾರರು ಭಯ ಭೀತರಾಗಿದ್ದಾರೆ. ಹಿಂಡನ್ ಬರ್ಗ್ ವರದಿ ವಿವಾದದ ಬಗ್ಗೆ ಶರ್ಮಾ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಒಂದು ಭಾಗವಿದು.


ಹಿಂಡನ್ ಬರ್ಗ್ ವರದಿ ಬಗ್ಗೆ ಒಂದು ತಜ್ಞರ ಸಮಿತಿ ರಚಿಸಲು ಮುಚ್ಚಿದ ಲಕೋಟೆಯಲ್ಲಿ ಹೆಸರುಗಳ ಪಟ್ಟಿ ಸ್ವೀಕರಿಸುವುದಿಲ್ಲ ಎಂದು ಸುಪ್ರೀಂ ಕೋರ್ಟು ಫೆಬ್ರವರಿ 17ರಂದು ಹೇಳಿತ್ತು. ಹಿಂಡನ್ ಬರ್ಗ್ ವರದಿಯಿಂದಾಗಿ ಅದಾನಿ ಷೇರುಗಳು ಪಾತಾಳ ಕಂಡಿದ್ದು, ಹೂಡಿಕೆದಾರರಿಗೆ ಭಾರೀ ನಷ್ಟವಾಗಿದೆ ಎನ್ನುವುದು ಕೋರ್ಟಿನ ಮುಂದಿರುವ ವಿಷಯ.
ಸರ್ವೋಚ್ಚ ನ್ಯಾಯಾಲಯವು ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು. ಸಮಿತಿ ರಚಿಸಲು ಕೇಂದ್ರ ಸರಕಾರವು ಕೊಡುವ ತಜ್ಞರ ಹೆಸರುಗಳ ಪಟ್ಟಿಯನ್ನು ಹೇಗೆ ತಾನೆ ಮುಚ್ಚಿದ ಲಕೋಟೆಯಲ್ಲಿ ಸ್ವೀಕರಿಸುವುದು ಸಾಧ್ಯ ಎಂದು ಸುಪ್ರೀಂ ಸ್ಪಷ್ಟಪಡಿಸಿತು.
ಸಿಜೆಐ ಅಲ್ಲದೆ ಸದರಿ ಸುಪ್ರೀಂ ಕೋರ್ಟ್’ನ ನ್ಯಾಯ ಪೀಠದಲ್ಲಿ ಜಸ್ಟಿಸ್ ಗಳಾದ ಪಿ. ಎಸ್. ನರಸಿಂಹ ಮತ್ತು ಜೆ. ಬಿ. ಪರ್ದಿವಾಲ ಅವರುಗಳು ಇದ್ದರು. ಕೋರ್ಟಿನ ಬಗ್ಗೆ ನಂಬಿಕೆ ಇರಬೇಕು, ಹೂಡಿಕೆದಾರರು ಸಹ ಪಾರದರ್ಶಕತೆ ಗಮನಿಸಬೇಕು ಎಂದರು.
ಹೂಡಿಕೆದಾರರ ಹಿತ ರಕ್ಷಿಸಲಾಗುವುದು ಎಂದು ಸುಪ್ರೀಂಕೋರ್ಟ್ ಫೆಬ್ರವರಿ 10ರಂದು ಈ ಸಂಬಂಧ ತಿಳಿಸಿತ್ತು. ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದ ಜಸ್ಟಿಸ್ ಒಬ್ಬರ ನೇತೃತ್ವದಲ್ಲಿ ಅದಾನಿ ಷೇರು ಕುಸಿತದ ಬಗ್ಗೆ ಸಮಿತಿ ರಚಿಸುವ ವಿಷಯವೂ ಅಂದೂ ಕೋರ್ಟಿನೆದುರು ಇತ್ತು.
ವಕೀಲರುಗಳಾದ ಎಂ. ಎಲ್. ಶರ್ಮಾ, ವಿಶಾಲ್ ತಿವಾರಿ, ಕಾಂಗ್ರೆಸ್ ನಾಯಕ ಜಯಾ ಠಾಕೂರ್ ಹಾಗೂ ಮುಕೇಶ್ ಕುಮಾರ್ ಎಂದು ಈ ಸಂಬಂಧ ನಾಲ್ಕು ಪಿಐಎಲ್- ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳು ಸುಪ್ರೀಂ ಕೋರ್ಟಿನ ಮುಂದೆ ಇವೆ.



Join Whatsapp