ಸಿ.ಟಿ. ರವಿಗೆ ಮೂಳೆ ಬಿರಿಯಾನಿ ಪಾರ್ಸೆಲ್ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು

Prasthutha|

ಬೆಂಗಳೂರು: ಮಾಂಸ ಸೇವಿಸಿ ದೇವಸ್ಥಾನ ಪ್ರವೇಶ ಮಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ ರವಿಗೆ ಕಾಂಗ್ರೆಸ್ ಕಾರ್ಯಕರ್ತರು ಬಿರಿಯಾನಿ, ನಲ್ಲಿಮೂಳೆ ಪಾರ್ಸೆಲ್ ಮಾಡಿದ್ದಾರೆ.

- Advertisement -


ಸಿಟಿ ರವಿ ಮಾಂಸ ತಿಂದು ನಾಗಬನಕ್ಕೆ ಭೇಟಿ ಕೊಟ್ಟಿದ್ದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು (ಶುಕ್ರವಾರ) ಬೆಳಗ್ಗೆ ಸಿಟಿ ರವಿಗೆ ನಲ್ಲಿ ಮೂಳೆ ಬಿರಿಯಾನಿ ಚಿಕನ್ ಪಾರ್ಸೆಲ್ ಮಾಡಿದ್ದಾರೆ. ಅಲ್ಲದೇ ಸಿಟಿ ರವಿ ನಾನ್ ವೆಜ್ ತಿನ್ನುವ ಬಗ್ಗೆ ಅಣಕು ಪ್ರದರ್ಶನ ಮಾಡಿ, ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಸಿ.ಟಿ. ರವಿಗೆ ದೇವಾಲಯ ಪ್ರವೇಶ ನಿರ್ಬಂಧ ಹೇರಬೇಕು ಎಂದು ಮುಜರಾಯಿ ಇಲಾಖೆಗೆ ಕಾಂಗ್ರೆಸ್ ಆಗ್ರಹ ಪಡಿಸಿದೆ. ಕೂಡಲೇ ರವಿ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Join Whatsapp