ಹೊಸದಿಲ್ಲಿ: ದೇಶದಾದ್ಯಂತ ಜನಸಂಖ್ಯಾ ನಿಯಂತ್ರಣ ನೀತಿ ಮತ್ತು ಎರಡು ಮಕ್ಕಳ ನಿಯಮ ಜಾರಿಗೊಳಿಸಲು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಅಭಯ್ ಎಸ್. ಓಕಾ ಅವರಿದ್ದ ಪೀಠವು, ಇದನ್ನು ಕಾನೂನು ಆಯೋಗಕ್ಕೆ ಶಿಫಾರಸು ಮಾಡುವಂತೆ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರಿಗೆ ನಿರ್ದೇಶನ ನೀಡಿದೆ.
‘ಈ ಸಾಮಾಜಿಕ ಸಮಸ್ಯೆಯನ್ನು ಸರ್ಕಾರ ನೋಡಿಕೊಳ್ಳಲಿದೆ. ದೇಶದಲ್ಲಿ ಜನಸಂಖ್ಯೆ ಬೆಳವಣಿಗೆ ಇಳಿಮುಖದಲ್ಲಿದೆ. ಇದು ನ್ಯಾಯಾಲಯ ಹಸ್ತಕ್ಷೇಪ ಮಾಡುವಂತಹ ಸಮಸ್ಯೆಯಲ್ಲ. ನಮಗೆ ಮಾಡಲು ಇದಕ್ಕಿಂತಲೂ ಅತ್ಯುತ್ತಮ ಕೆಲಸಗಳು ಬಾಕಿ ಇವೆ’ ಎಂದು ಪೀಠ ಹೇಳಿದೆ.