ಸರ್ಕಾರಿ ಬ್ಯಾಂಕ್‌ಗಳ CEO ಸೇವಾ ಅವಧಿ ಗರಿಷ್ಠ 10 ವರ್ಷಕ್ಕೆ ಏರಿಕೆ

Prasthutha|

ಹೊಸದಿಲ್ಲಿ: ಸರ್ಕಾರಿ ಬ್ಯಾಂಕ್‌ಗಳ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರ ಸೇವಾ ಅವಧಿಯನ್ನು ಕೇಂದ್ರ ಸರ್ಕಾರ ಗರಿಷ್ಠ 10 ವರ್ಷಕ್ಕೆ ಏರಿಕೆ ಮಾಡಿದೆ.  

- Advertisement -

 ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕರ ಸೇವಾ ಅವಧಿಯನ್ನು 5 ವರ್ಷಗಳಿಂದ 10 ವರ್ಷಗಳವರೆಗೆ ವಿಸ್ತರಿಸಿ ಅಧಿಸೂಚನೆ ಹೊರಡಿಸಿದೆ. ಇದು 60 ವರ್ಷಗಳ ನಿವೃತ್ತಿ ವಯಸ್ಸಿನ ಮಿತಿಗೆ ಒಳಪಟ್ಟಿದೆ.

ಈ ಮೊದಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಿಇಒ ಅವಧಿಯು ಗರಿಷ್ಠ 5 ವರ್ಷ ಅಥವಾ 60 ವರ್ಷ ವಯಸ್ಸು; ಇವುಗಳಲ್ಲಿ ಯಾವುದು ಮೊದಲೋ ಅದು ಅನ್ವಯವಾಗುವಂತೆ ಇತ್ತು.

- Advertisement -

ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಪೂರ್ಣಾವಧಿ ನಿರ್ದೇಶಕರು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಆರಂಭಿಕವಾಗಿ ಐದು ವರ್ಷಗಳನ್ನು ಮೀರದಂತೆ ಅಧಿಕಾರದಲ್ಲಿ ಇರಬಹುದು. ಆ ಬಳಿಕ ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಸಲಹೆಯ ಮೇರೆಗೆ ಮತ್ತೆ ಗರಿಷ್ಠ ಐದು ವರ್ಷಗಳ ಅವಧಿಗೆ ಮರು ನೇಮಕ ಮಾಡಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

.

Join Whatsapp