‘ಲವ್ ಜಿಹಾದ್’ ಕಾನೂನಿನ ಸಾಂವಿಧಾನಿಕ ಮಾನ್ಯತೆಯ ಪರಿಶೀಲಿಸಲು ಒಪ್ಪಿಕೊಂಡ ಸುಪ್ರೀಂ ಕೋರ್ಟ್

Prasthutha|

ನವದೆಹಲಿ : ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ಜಾರಿಗೊಳಿಸಲಾದ ಕಾನೂನು ಬಾಹಿರ ಮತಾಂತರ ತಡೆ ಕಾಯ್ದೆ (‘ಲವ್ ಜಿಹಾದ್’ ಕಾನೂನು)ಯ ಸಾಂವಿಧಾನಿಕ ಮಾನ್ಯತೆಯ ಬಗ್ಗೆ ಪರಿಶೀಲಿಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಈ ಸಂಬಂಧ ಎರಡೂ ರಾಜ್ಯ ಸರಕಾರಗಳಿಗೆ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

- Advertisement -

ಈ ವಿವಾದಿತ ಕಾನೂನಿನಿಂದಾಗಿ ಸಂವಿಧಾನದ ಮೂಲಭೂತ ವ್ಯವಸ್ಥೆಗೆ ಹಾನಿಯಾಗಿದೆ. ಇದು ಜಾತ್ಯತೀತತೆ, ಸಮಾನತೆ ಮತ್ತು ತಾರತಮ್ಯ ರಹಿತ ನೀತಿಗಳಿಗೆ ವಿರುದ್ಧವಾಗಿದೆ ಎಂದು ಆಪಾದಿಸಿ ಕಾನೂನಿನ ಮಾನ್ಯತೆಯನ್ನು ಪ್ರಶ್ನಿಸಿ ದಾಖಲಿಸಲ್ಪಟ್ಟಿರುವ ಹಲವು ಪ್ರಕರಣಗಳ ಕುರಿತು ಪರಿಶೀಲನೆಗೆ ಕೈಗೆತ್ತಿಕೊಂಡಿರುವ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಆರಂಭದಲ್ಲಿ ಕೋರ್ಟ್ ಈ ಬಗ್ಗೆ ವಿಚಾರಣೆಗೆ ನಿರಾಕರಿಸಿ, ಅರ್ಜಿದಾರರು ಹೈಕೋರ್ಟ್ ಗೆ ಯಾಕೆ ಹೋಗಬಾರದು? ಎಂದು ಪ್ರಶ್ನಿಸಿತ್ತು. ಆದರೆ, ಸಿಟಿಝನ್ಸ್ ಫಾರ್ ಜಸ್ಟೀಸ್ ಆಂಡ್ ಪೀಸ್ ಪರವಾಗಿ ಅರ್ಜಿ ಸಲ್ಲಿಸಿರುವ ಹಿರಿಯ ನ್ಯಾಯವಾದಿ ಸಿ.ಯು. ಸಿಂಗ್, ವಿವಿಧ ರಾಜ್ಯಗಳಲ್ಲಿ ಕಾನೂನು ಜಾರಿಗೊಳ್ಳುತ್ತಿರುವುದರಿಂದ ಸರ್ವೋಚ್ಛ ನ್ಯಾಯಾಲಯವೇ ಈ ವಿಷಯ ಕೈಗೆತ್ತಿಕೊಳ್ಳುವುದು ಸೂಕ್ತ ಎಂದಿದ್ದರು.  



Join Whatsapp