ಹಿಜಾಬ್ ಕುರಿತ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿ

Prasthutha|

ನವದೆಹಲಿ: ಹಿಜಾಬ್ ನಿಷೇಧ ಪ್ರಶ್ನಿಸಿ ಕರ್ನಾಟಕದ ವಿದ್ಯಾರ್ಥಿಗಳು ಸಲ್ಲಿಸಿರುವ ಮೇಲ್ಮನವಿಯನ್ನು ಶೀಘ್ರ ವಿಚಾರಣೆಗೆ ಪಟ್ಟಿ ಮಾಡಲು ಸೂಚಿಸಲಾಗುವುದು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ತಿಳಿಸಿದ್ದಾರೆ.

- Advertisement -


ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ನೀಡುವಂತೆ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಲು ಕೋರಿ ಸಲ್ಲಿಸಿರುವ ಅರ್ಜಿಯನ್ನು ಪಟ್ಟಿ ಮಾಡುವ ಸೂಚಿಸುವುದಾಗಿ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಬುಧವಾರ ತಿಳಿಸಿದರು.
ಮಾರ್ಚ್ 9 ರಿಂದ ಪರೀಕ್ಷೆಗಳು ಪ್ರಾರಂಭವಾಗಲಿವೆ. ಆದ್ದರಿಂದ ಈ ಕುರಿತ ಮೇಲ್ಮನವಿಯನ್ನು ಪರಿಗಣಿಸಬೇಕು ಎಂದು ವಕೀಲ ಶಾದನ್ ಫರಾಸ್ಟ್ ಅವರು ಸಿಜೆಐ ಮುಂದೆ ಬುಧವಾರ ವಿಷಯ ಪ್ರಸ್ತಾಪಿಸಿದರು.


“ವಿದ್ಯಾರ್ಥಿನಿಯರು ಪರೀಕ್ಷೆ ತೆಗೆದುಕೊಳ್ಳದಂತೆ ಏಕೆ ತಡೆಯಲಾಗಿದೆ?” ಎಂದು ಸಿಜೆಐ ಪ್ರಶ್ನಿಸಿದರು.
“ಏಕೆಂದರೆ ಅವರು ಹಿಜಾಬ್ ಧರಿಸಿದ್ದಾರೆ” ಎಂದು ಫರಾಸತ್ ಉತ್ತರಿಸಿದರು.
“ನಾನು ಈ ಬಗ್ಗೆ ಗಮನ ಹರಿಸುತ್ತೇನೆ” ಎಂದು ಸಿಜೆಐ ಭರವಸೆ ನೀಡಿದರು.

- Advertisement -

“ಅವರು ಈಗಾಗಲೇ ಒಂದು ವರ್ಷವನ್ನು ಕಳೆದುಕೊಂಡಿದ್ದಾರೆ. ಅವರು ಇನ್ನೂ ಒಂದು ವರ್ಷವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಅವರಿಗೆ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕು ಎಂಬುದಷ್ಟೇ ನಮ್ಮ ಮನವಿ. ನಾನು ಬೇರೆ ಯಾವುದೇ ನಿರ್ದೇಶನಗಳನ್ನು ಬಯಸುತ್ತಿಲ್ಲ” ಎಂದು ಫರಾಸತ್ ಹೇಳಿದರು.


ಸರ್ಕಾರಿ ಕಾಲೇಜುಗಳಲ್ಲಿ ನಡೆಯುವ ಪರೀಕ್ಷೆಗಳನ್ನು ಬರೆಯಬೇಕಾಗಿರುವುದರಿಂದ ಹಿಜಾಬ್ ಕುರಿತ ಅರ್ಜಿಯನ್ನು ತುರ್ತು ಪಟ್ಟಿಯ ಮನವಿಯನ್ನು ಪರಿಗಣಿಸಲು ಜನವರಿ 23 ರಂದು ಸಿಜೆಐ ಒಪ್ಪಿಕೊಂಡಿದ್ದರು.
ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ಕರ್ನಾಟಕ ಸರ್ಕಾರ ನಿಷೇಧಿಸಿದ ನಂತರ, ಹಲವಾರು ಮುಸ್ಲಿಂ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳಿಗೆ ಹೋಗಬೇಕಾಯಿತು. ಆದಾಗ್ಯೂ, ಪರೀಕ್ಷೆಗಳನ್ನು ಸರ್ಕಾರಿ ಕಾಲೇಜುಗಳಲ್ಲಿ ನಡೆಸಲಾಗುತ್ತದೆ. ಈ ಹಿನ್ನೆಲೆಯಲ್ಲಿ, ಅರ್ಜಿದಾರರು ಪರೀಕ್ಷೆಗಳಿಗೆ ಹಾಜರಾಗಲು ಅನುಮತಿ ಕೋರಿದ್ದಾರೆ.

Join Whatsapp