ಫೆ.25ರಂದು ಬೃಹತ್ ಉದ್ಯೋಗ ಮೇಳ ಮತ್ತು ಚಿಕ್ಕಪೇಟೆ ಜನೋತ್ಸವ 2023

Prasthutha|

ಬೆಂಗಳೂರು: ಯುವ ಸಬಲೀಕರಣ ಮತ್ತು ಮಹಿಳಾ ಸಬಲೀಕರಣ, ಆರ್‌’ವಿಡಿ ಟ್ರಸ್ಟ್’ನಿಂದ ಫೆ. 25ರಂದು ಬೆಂಗಳೂರಿನ ವಿವಿ ಪುರಂನ ಬಿಐಟಿ ಕಾಲೇಜಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಇದೇ ವೇಳೆ ಭೃಹತ್ ಚಿಕ್ಕಪೇಟೆ ಜನೋತ್ಸವ 2023 ಆಯೋಜಿಸಲಾಗಿದೆ.

- Advertisement -

ವಿಶೇಷವಾಗಿ ಅವಿದ್ಯಾವಂತ ಮತ್ತು ವಿದ್ಯಾವಂತ ಸಮೂಹಗಳಿಗೆ ಜೀವನೋಪಾಯ ರೂಪಿಸುವ ಉದ್ದೇಶದಿಂದ ಉದ್ಯೋಗ ಮೇಳ ಏರ್ಪಡಿಸಲಾಗಿದೆ. ಹೋಂಡಾ, ಬಿಗ್ ಬಾಸ್ಕೆಟ್, ಅಮೆಜಾನ್, ಟೆಕ್ ರೈಟ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನೇತರ ವಲಯದ 125 ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಭಾಗವಹಿಸುತ್ತಿವೆ. ಜೊತೆಗೆ ಸಾಲ ಸೌಲಭ್ಯಗಳೊಂದಿಗೆ ಸ್ವಯಂ ಉದ್ಯೋಗ ಅವಕಾಶಗಳಿಗೂ ಆದ್ಯತೆ ನೀಡಲಾಗುತ್ತಿದೆ. ಪೂರ್ಣ, ಅರೆಕಾಲಿಕ ಉದ್ಯೋಗ,  ಮನೆಯಿಂದ ಕೆಲಸ ಮಾಡಲು ಆಸಕ್ತಿ ಇರುವವರು ಸಹ ಮೇಳದಲ್ಲಿ ಭಾಗವಹಿಸಬಹುದಾಗಿದೆ.

ಯಾವುದೇ ಪದವೀಧರರು, ಎಸ್.ಎಸ್.ಎಲ್.ಸಿ, ಪಿಯುಸಿ, ಇಂಜಿನಿಯರಿಂಗ್, 7ನೇ ತೇರ್ಗಡೆಯಾದವರು ಸಹ ಭಾಗವಹಿಸಬಹುದಾಗಿದೆ.

- Advertisement -

ನೋಂದಣಿ ಮತ್ತು ಸ್ಪಾಟ್ ನೋಂದಣಿಗಾಗಿ ಸಂಪರ್ಕಿಸಿ:  9108636275/9844159891

Join Whatsapp