ಮೈಸೂರು ಗ್ರಾಮಾಂತರ  ವಿಮೆನ್ ಇಂಡಿಯಾ ಮೂವ್ಮೆಂಟ್ ಅಧ್ಯಕ್ಷೆಯಾಗಿ ಸಾಯಿಮಾ ಸಿದ್ದೀಖ ಆಯ್ಕೆ

Prasthutha|

ಮೈಸೂರು: ವಿಮೆನ್ ಇಂಡಿಯಾ ಮೂವ್ಮೆಂಟ್ ಮೈಸೂರು (ಹುಣಸೂರು )ಗ್ರಾಮಾಂತರ ಜಿಲ್ಲಾ  ಪ್ರತಿನಿಧಿ ಸಭೆಯು ದಿನಾಂಕ 1-8-2023 ರಂದು ಹುಣಸೂರಿನಲ್ಲಿ ನಡೆಯಿತು.

- Advertisement -

 ಸಮೀನಾ ಇಮ್ರಾನ್ ರವರ ಸಭಾಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 2021-23 ಅವಧಿಯ ವರದಿಯನ್ನು ಮಂಡಿಸಲಾಯಿತು. ಕಾರ್ಯಕ್ರಮವನ್ನು ವಿಮ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯ ಬೆಳ್ಳಾರೆ  ಉದ್ಘಾಟಿಸಿದರು. ನೂತನ ಜಿಲ್ಲಾಧ್ಯಕ್ಷೆಯಾಗಿ ಸಾಯಿಮಾ ಸಿದ್ದೀಕ, ಉಪಾಧ್ಯಕ್ಷೆಯಾಗಿ ಸಮೀನಾ ಇಮ್ರಾನ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾಹೆರಾ ಆಜಾದ್ ನಗರ , ಕಾರ್ಯದರ್ಶಿಯಾಗಿ ಶಬ್ರೀನ್ ತಾಜ್ ,  ಕೋಶಾಧಿಕಾರಿಯಾಗಿ ಸಲ್ಮಾ ಬಾನು ಆಜಾದ್ ನಗರ, ಸಮಿತಿ ಸದಸ್ಯರುಗಳಾಗಿ  ಆಯಿಷಾ  ದುರ್ಗಾ, ಝಬೀನಾ, ಮಹ್ಸಿನಾ ಕೆ ಆರ್ ನಗರ ಹಾಗೂ ಹರ್ಶಿಯ ಬಾನುರವರು ಆಯ್ಕೆಯಾಗಿರುತ್ತಾರೆ. 

ಸಭೆಯಲ್ಲಿ  ವಿಮೆನ್ ಇಂಡಿಯಾ ಮೂವ್ಮೆಂಟ್  “ಅನ್ಯಾಯದ ವಿರುದ್ಧ ಒಂದಾಗಿ ಸೆಟೆದು ನಿಲ್ಲಿರಿ”  ರಾಷ್ಟ್ರೀಯ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ನೂತನವಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷೆ  ಸಾಯಿಮಾ ಸಿದ್ದೀಕ ರವರು ಸಭೆಯನ್ನುದ್ದೇಶಿಸಿ ಮಾತನಾಡಿದರು ಮತ್ತು ಆಯಿಷಾ  ದರ್ಗಾ ರವರು ಕಾರ್ಯಕ್ರಮವನ್ನು ನಿರೂಪಿಸಿದರು..

Join Whatsapp