ಚಂದ್ರಯಾನ-3 ಮತ್ತೊಂದು ಮೈಲಿಗಲ್ಲು: ಭೂಕಕ್ಷೆ ತೊರೆದು ಚಂದ್ರನ ಕಡೆಗೆ ಯಶಸ್ವಿ ಪ್ರಯಾಣ

Prasthutha|

ಬೆಂಗಳೂರು: ಚಂದ್ರಯಾನ-3 ಗಗನನೌಕೆಯ ಪಯಣ ಮಹತ್ವದ ಮಜಲು ತಲುಪಿದೆ. ಭೂಮಿಯ ಕಕ್ಷೆಯಲ್ಲಿ ಯಶಸ್ವಿಯಾಗಿ 5 ಸುತ್ತು ಹಾಕಿದ ಚಂದ್ರಯಾನ-3 ನೌಕೆ ಈಗ ಚಂದ್ರನ ಕಕ್ಷೆಯತ್ತ ಹೊರಟಿದೆ.

- Advertisement -

ಕಳೆದ 15 ದಿನಗಳಲ್ಲಿ ಭೂಮಿಯ ಕಕ್ಷೆಯಲ್ಲಿ ಐದು ರೌಂಡ್ ಪೂರ್ಣಗೊಳಿಸಿರುವ ಚಂದ್ರಯಾನ-3 ನೌಕೆ ಈಗ ಇಸ್ರೋ ತೋರಿಸಿದ ಟ್ರಾನ್ಸ್ ಲೂನಾರ್ ಪಥದಲ್ಲಿ ಚಲಿಸತೊಡಗಿದೆ. ಸೋಮವಾರ ಮಧ್ಯರಾತ್ರಿ ಗಗನನೌಕೆ ತನ್ನ ಪಥ ಬದಲಿಸಿದೆ. ಮುಂದಿನ ನಿಲ್ದಾಣ ಚಂದ್ರನ ಅಂಗಳ ಎಂದು ಇಸ್ರೋ (ISRO) ಟ್ವೀಟ್ ಮಾಡಿದೆ.

ಚಂದ್ರಯಾನ-3 ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಹೊಂದಿದೆ. ಲ್ಯಾಂಡರ್ ಮತ್ತು ರೋವರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು 14 ದಿನಗಳ ಕಾಲ ಅಲ್ಲಿ ಪ್ರಯೋಗಗಳನ್ನು ನಡೆಸುತ್ತದೆ. ಈ ಕಾರ್ಯಾಚರಣೆಯ ಮೂಲಕ, ಇಸ್ರೋ ಚಂದ್ರನ ಮೇಲ್ಮೈಯಲ್ಲಿ ಭೂಕಂಪಗಳು ಹೇಗೆ ಸಂಭವಿಸುತ್ತವೆ ಎಂಬುದನ್ನು ಕಂಡುಹಿಡಿಯುತ್ತದೆ ಮತ್ತು ಚಂದ್ರನ ಮಣ್ಣನ್ನು ಅಧ್ಯಯನ ಮಾಡುತ್ತದೆ. ಇಸ್ರೋ ಆಗಸ್ಟ್ 23 ರಂದು ಸಂಜೆ 5.47ಕ್ಕೆ ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಅನ್ನು ಇಳಿಸಲು ಪ್ರಯತ್ನಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಜುಲೈ 14ರಂದು ಚಂದ್ರಯಾನ-3 ಗಗನನೌಕೆಯ ಉಡಾವಣೆ ನಡೆದಿತ್ತು. ಮುಂದಿನ 25 ದಿನದಲ್ಲಿ ಈ ನೌಕೆ ಚಂದ್ರನ ಮೇಲ್ಮೈನಲ್ಲಿ ಇಳಿಯುವ ಸಂಭವ ಇದೆ.

Join Whatsapp