ಚಲಿಸುತ್ತಿದ್ದ ರೈಲಿನಿಂದ ಎಸೆಯಲ್ಪಟ್ಟರೂ ಬದುಕುಳಿದ!

Prasthutha|

►ಮೈನವಿರೇಳಿಸುವ ವೀಡಿಯೋ ವೈರಲ್!

- Advertisement -

ಮುಂಬೈ: ಚಲಿಸುತ್ತಿದ್ದ ರೈಲಿಗೆ ಹತ್ತಲು ಯತ್ನಿಸಿದ ಯುವಕ ಕೇವಲ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಮುಂಬೈನ ಬೋರಿವಾಲಿ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

 ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಅಧಿಕಾರಿಗಳ ಸಮಯಪ್ರಜ್ಞೆಯಿಂದ ಯುವಕ ಸಾವಿನ ದವಡೆಯಿಂದ ಪಾರಾಗಿದ್ದು, ಘಟನೆಯ ವೀಡಿಯೋ ವ್ಯಾಪಕ ವೈರಲಾಗಿದೆ.

- Advertisement -

ರೈಲು ಚಲಿಸುತ್ತಿದ್ದಂತೆಯೇ ಯುವಕ ಕಂಪಾರ್ಟ್ಮೆಂಟ್ ಗೆ ಹತ್ತಿದರೂ ರೈಲಿನೊಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಕೆಳಗೆ ಎಸೆಯಲ್ಪಟ್ಟ ಯುವಕ ರೈಲಿನ ಹಳಿಗೆ ಬೀಳದೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಂತರ ಸಮಯಪ್ರಜ್ಞೆ ಮೆರೆದ ರೈಲ್ವೆ ಸಂರಕ್ಷಣಾ ಪಡೆಯ ಸಿಬ್ಬಂದಿ ಯುವಕನನ್ನು ರಕ್ಷಿಸಿದ್ದಾರೆ.

ಘಟನೆಯ ವಿಡಿಯೋ ತುಣುಕನ್ನು ರೈಲ್ವೆ ಇಲಾಖೆ ಬಿಡುಗಡೆ ಮಾಡಿದೆ. ಈ ಹಿಂದೆ ರೈಲ್ವೇ ನಿಲ್ದಾಣದಲ್ಲಿ ಅನೇಕ ಅಪಘಾತಗಳು ನಡೆದಿದ್ದರೂ ಕೆಲವು ಪ್ರಯಾಣಿಕರು ಇನ್ನೂ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬುದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ.  



Join Whatsapp