ಕೋವಿಶೀಲ್ಡ್ ಲಸಿಕೆ ಪಡೆದವರು ಈ 9 ಯುರೋಪಿಯನ್ ರಾಷ್ಟ್ರಗಳಿಗೆ ಪ್ರಯಾಣಕ್ಕೆ ಅನುಮತಿ
Prasthutha: July 1, 2021

ನವದೆಹಲಿ : ಕೋವಿಡ್ ತಡೆಗಾಗಿ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡವರು ತಮ್ಮ ದೇಶಕ್ಕೆ ಪ್ರವೇಶಿಸಲು ಯುರೋಪ್ ನ ಒಂಬತ್ತು ರಾಷ್ಟ್ರಗಳು ಅನುಮತಿ ನೀಡಿವೆ ಎಂದು ವರದಿಗಳು ತಿಳಿಸಿವೆ.
ಆಸ್ಟ್ರಿಯಾ, ಜರ್ಮನಿ, ಸ್ಲೊವೇನಿಯಾ, ಗ್ರೀಸ್, ಐಲ್ಯಾಂಡ್, ಸ್ಪೇನ್, ಸ್ವಿಟ್ಝರ್ಲ್ಯಾಂಡ್ ಹಾಗೂ ಎಸ್ಟೊನಿಯಾ ಮುಂತಾದ ದೇಶಗಳು ಕೋವಿಶೀಲ್ಡ್ ಲಸಿಕೆ ಪಡೆದವರು ತಮ್ಮ ದೇಶಕ್ಕೆ ಪ್ರವೇಶಿಸಬಹುದು ಸಬಹುದು ಎಂದಿವೆ. ಆದಾಗ್ಯೂ, ಭಾರತ ಮತ್ತು ಯುರೋಪಿಯನ್ ರಾಷ್ಟ್ರಗಳ ನಡುವಿನ ಪ್ರಯಾಣಕ್ಕಿರುವ ಕಠಿಣ ನಿಯಮಗಳು ಚಾಲ್ತಿಯಲ್ಲಿರಲಿವೆ.
ಕೋವಿಡ್ ಸಾಂಕ್ರಾಮಿಕತೆ ಸಂದರ್ಭದಲ್ಲಿ ಜನರ ಪ್ರಯಾಣಕ್ಕೆ ತೊಂದರೆ ಆಗಬಾರದು ಎಂಬ ದೃಷ್ಟಿಯಿಂದ ಐರೋಪ್ಯ ಒಕ್ಕೂಟವು ಲಸಿಕೆ ಪಡೆದವರಿಗೆ ʼಡಿಜಿಟಲ್ ಕೋವಿಡ್ ಪ್ರಮಾಣಪತ್ರʼ ಅಥವಾ ʼಗ್ರೀನ್ ಪಾಸ್ʼ ವಿತರಿಸುವ ಕಾರ್ಯವನ್ನು ರೂಪಿಸಿದ್ದು, ಗುರುವಾರದಿಂದ ಅದು ಚಾಲ್ತಿಗೆ ಬರಲಿದೆ.
ಈ ವ್ಯವಸ್ಥೆಯಡಿ ಯುರೋಪಿಯನ್ ಔಷಧ ಸಂಸ್ಥೆ ಅನುಮೋದಿಸಿರುವ ಲಸಿಕೆಯನ್ನು ಪಡೆದವರು ಯಾವುದೇ ನಿರ್ಬಂಧಗಳಿಲ್ಲದೇ ಯುರೋಪಿಯನ್ ರಾಷ್ಟ್ರಗಳಿಗೆ ಪ್ರಯಾಣಿಸಬಹುದಾಗಿದೆ.
