ಜಾರ್ಖಂಡ್’ನ ಶಿಖರ್ಜಿ ಪವಿತ್ರ ಸ್ಥಳ ಉಳಿಸಿ;  ಜೈನರಿಂದ ಬೃಹತ್ ಆಂದೋಲನ

Prasthutha|

ಬೆಂಗಳೂರು: ಜಾರ್ಖಂಡ್ ರಾಜ್ಯದಲ್ಲಿರುವ ಜೈನರ ಪವಿತ್ರ ಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಜಾರ್ಖಂಡ್ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಜಂಟಿಯಾಗಿ ಪ್ರವಾಸಿ ತಾಣವೆಂದು ಘೋಷಿಸಿರುವುದನ್ನು ಹಿಂದಕ್ಕೆ ಪಡೆಯಬೇಕೆಂದು ಶಿಖರ್ಜಿ ಉಳಿಸಿ ಬೃಹತ್ ಆಂದೋಲನ ಬೆಂಗಳೂರಿನಲ್ಲಿಂದು ನಡೆಯಿತು.

- Advertisement -

  ಜೈನ ಸಮುದಾಯ ಭವನದಿಂದ ಆರಂಭಗೊಂಡ ಮೆರವಣಿಗೆ ಅವೆನ್ಯೂ ರಸ್ತೆ ಮೂಲಕ ಚಿಕ್ಕಪೇಟೆ ಬಸದಿಯ ಮಾರ್ಗವಾಗಿ ಪ್ರೀಡಂ ಪಾರ್ಕ್ ತಲುಪಿತು. ಚಿಕ್ಕಪೇಟೆ ಹಾಗೂ ಬೆಂಗಳೂರಿನ ಸುತ್ತಮುತ್ತಲಿನಲ್ಲಿರುವ ಜೈನ ವರ್ತಕರು ಅಂಗಡಿ ಮುಗ್ಗಟ್ಟು ಗಳನ್ನು ಮುಚ್ಚಿ ಶಿಖರ್ಜಿ ಆಂದೋಲನ ಬೆಂಬಲಿಸಿದರು.

ಜಾರ್ಖಂಡ್’ನಲ್ಲಿರುವ ಈ ಕ್ಷೇತ್ರ ಇಪ್ಪತ್ತು ತೀರ್ಥಂಕರರು ಮುಕ್ತಿ ಹೊಂದಿದ ತಾಣವಾಗಿದೆ. ಈ ಕ್ಷೇತ್ರವನ್ನು ದರ್ಶನ ಮಾಡಿದರೆ ಸಕಲ ಪಾಪಗಳು ನಾಶವಾಗುತ್ತವೆ ಎಂಬ ನಂಬಿಕೆ ಜೈನರಿಗಿದೆ. ಜೈನರ ಪರಮ ಪವಿತ್ರ ಕ್ಷೇತ್ರ ಇದಾಗಿದೆ. ಪ್ರವಾಸ ಕ್ಷೇತ್ರ ಮಾಡಿದರೆ ಇದು ಮಲೀನಗೊಳ್ಳಲಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಶಿಖರ್ಜಿ ಉಳಿಸಿ ಬೃಹತ್ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಭಟನಕಾರರು ತಿಳಿಸಿದರು.

- Advertisement -

ಭುವನಕೀರ್ತಿ ಭಟ್ಟಾರಕ ಮಹಾಸ್ವಾಮಿ, ದವಲಕೀರ್ತಿ ಭಟ್ಟಾರಕ ಸ್ವಾಮಿ, ಬಾನುಕೀರ್ತಿ ಭಟ್ಟಾರಕ ಸ್ವಾಮಿ ಸೇರಿದಂತೆ ಅನೇಕರು ಆಂದೋಲನದಲ್ಲಿ ಭಾಗವಹಿಸಿದ್ದರು.

  ಕಾರ್ಯದರ್ಶಿ ರಾಜಕೀರ್ತಿ ಗೌತಮದ ಚಂದ್ ಸೋಲಂಕಿ, ಯುವ ಜೈನ ಸಂಘಟನೆ ಅಧ್ಯಕ್ಷ ದಿನೇಶ್ ಖಿವಿಸರಾ, ಶೀತಲ್ ಕುಮಾರ್, ಮಹೇಶ್ ಜೈನ್, ಗೌತಮ್ ಮೆಹತಾ, ಹಿರಲಾಲ್ ಜೈನ್ ಮತ್ತಿತರರು ಹಾಜರಿದ್ದರು.



Join Whatsapp