ಅಸ್ಸಾಂ NRCಯಲ್ಲಿ ಭಾರೀ ಅಕ್ರಮ: ಆಡಿಟ್ ವರದಿಯಲ್ಲಿ ಬಹಿರಂಗ

Prasthutha|

►ಲಕ್ಷಾಂತರ ನೈಜ ಭಾರತೀಯರನ್ನೇ ಪಟ್ಟಿಯಿಂದ ಕೈಬಿಡಲಾಗಿದೆ

- Advertisement -

ನವದೆಹಲಿ: 2019ರ ಆಗಸ್ಟ್’ನಲ್ಲಿ ಅಸ್ಸಾಂ ಎನ್’ಆರ್’ಸಿ ಕರಡು ಪ್ರಕಟವಾಗಿದ್ದು, ಅದರಲ್ಲಿ ರಾಜ್ಯದ 19 ಲಕ್ಷ ಜನರನ್ನು ಅಕ್ರಮ ವಲಸೆಗಾರರು ಎಂದು ಪಟ್ಟಿಯ ಹೊರಗೆ ಇಡಲಾಗಿತ್ತು. ಆದರೆ ಇತ್ತೀಚೆಗೆ ಆಡಿಟ್’ನಲ್ಲಿ ಈ ಎನ್’ಆರ್’ಸಿ ಅಸ್ಸಾಂ ಪೌರತ್ವ ನೋಂದಣಿಯಲ್ಲಿ ಬರೀ ಅಕ್ರಮಗಳೇ ಇರುವುದು ಕಂಡು ಬಂದ ಬಳಿಕ ಇದು ಮತ್ತೆ ಸುದ್ದಿಯಲ್ಲಿದೆ.

ಹಲವಾರು ಹಣಕಾಸಿನ ಮತ್ತು ಸಾಫ್ಟ್’ವೇರ್ ಸಂಬಂಧಿ ತಪ್ಪುಗಳು ಇವೆ ಎಂದು ಸರಕಾರಕ್ಕೆ ತಿಳಿಸಲಾಗಿತ್ತು. ಆದರೆ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ ಎಂದು ಆ ಸಮಯದಲ್ಲಿ ಅದರ ಮುಖ್ಯಸ್ಥರಾಗಿದ್ದ ಹಿತೇಶ್ ದೇವ್ ಶರ್ಮಾ ಹೇಳಿದ್ದಾರೆ.

- Advertisement -

“ಲಕ್ಷಾಂತರ ವಿದೇಶೀಯರನ್ನು ಹಣಕ್ಕಾಗಿ ಈ ನೋಂದಣಿಯಲ್ಲಿ ಸೇರಿಸಿಕೊಳ್ಳಲಾಗಿದೆ ಮತ್ತು ಲಕ್ಷಾಂತರ ನಿಜವಾದ ಭಾರತೀಯರನ್ನೇ ಕೈಬಿಡಲಾಗಿದೆ” ಎಂದು ಹಿತೇಂದ್ರ ದೇವ್ ಹೇಳಿದ್ದಾರೆ. ಯಾಕೆಂದರೆ ಇತ್ತೀಚೆಗೆ ಸಿಎಜಿ-ಮಹಾಲೇಖಪಾಲರ ವರದಿಯಲ್ಲಿ ಈ ಪೌರತ್ವ ನೋಂದಣಿಯಲ್ಲಿ ಸಾಕಷ್ಟು ಅಕ್ರಮ, ಅವ್ಯವಹಾರ ಇರುವುದನ್ನು ಬೊಟ್ಟು ಮಾಡಿ ತೋರಿಸಲಾಗಿತ್ತು.

ದೂರಿನ ಮೆಲೆ ಅಸ್ಸಾಂ ಎನ್’ಆರ್’ಸಿಯನ್ನು ಸುಪ್ರೀಂ ಕೋರ್ಟ್ ಅವಗಾಹನೆಗೆ ಇಡಲಾಗಿತ್ತು. 2019ರಿಂದಲೂ ಇದರ ನಾನಾ ಹಂತದಲ್ಲಿ ಕುಂಟು ನೆಪದ, ಭ್ರಷ್ಟಾಚಾರದ, ಪ್ರಕ್ರಿಯೆಯ ಲೋಪಗಳು ಹೆಜ್ಜೆ ಹೆಜ್ಜೆಗೂ ಕಂಡು ಬಂದಿವೆ.

ಅಪ್ ಡೇಟಿಂಗಿಗಾಗಿ ತೀರಾ ಕಲುಷಿತವಾದ 215 ಸಾಫ್ಟ್’ವೇರ್ ಯುಟಿಲಿಟಿಗಳನ್ನು ಸೇರಿಸಲಾಗಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ. ದೀರ್ಘಾವಧಿಯ ಕಾರಣಕ್ಕೆ ಎನ್’ಆರ್’ಸಿ ಅಂದಾಜು ವೆಚ್ಚ 288.18 ಕೋಟಿಯನ್ನು ಹಿಂದಿಕ್ಕಿ 1,602.66 ಕೋಟಿ ರೂಪಾಯಿಗೆ ಏರಿಕೆಯಾಗಿತ್ತು. ಹಲವಾರು ಗುತ್ತಿಗೆದಾರರಿಗೆ ಲಾಭ ಮಾಡಲು ಅವರ ಶುಲ್ಕ ಪಾವತಿ ಮತ್ತು ಸಂಬಳದಲ್ಲಿ ರೂ. 155.83 ಕೋಟಿ ನುಂಗಿರುವುದು ಕೂಡ ಆಡಿಟ್’ನಲ್ಲಿ ಹೇಳಲಾಗಿದೆ.

“2019ರ ಡಿಸೆಂಬರ್ ನಲ್ಲಿ ನಾನು ಇದರ ಮುಖ್ಯ ಹುದ್ದೆಗೆ ಬಂದಾಗ ಪೌರತ್ವ ನೋಂದಣಿ ಪ್ರಕ್ರಿಯೆಯು ಸರಿಯಾದ ರೀತಿಯಲ್ಲಿ ಆಗಿಲ್ಲ, ಅಡ್ಡ ದಾರಿ ಸ್ಪಷ್ಟವಿತ್ತು ಎಂಬುದು ನನಗೆ ಕಂಡುಬಂತು” ಎಂದು ಹಿತೇಂದ್ರ ದೇವ್ ತಿಳಿಸಿದ್ದಾರೆ.

ನಾನು ಜನಗಣತಿಯಿಂದ ಹಿಡಿದು ಪೌರತ್ವ ನೋಂದಣಿಯವರೆಗೆ ಆಗಿರುವ ತಪ್ಪು ತಡೆಗಳ ಬಗ್ಗೆ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾದವರಿಗೆ ಮಾಹಿತಿ ನೀಡಿದೆ; ಆದರೆ ಅಲ್ಲಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಕಂಡು ಬರಲಿಲ್ಲ ಎಂದೂ ಅವರು ಹೇಳಿದರು.

ಅನಂತರ ನಾನು ಎನ್’ಆರ್’ಸಿ ಮರು ಅವಗಾಹನೆಗಾಗಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

“ರಾಜ್ಯ ಸರಕಾರವಾಗಲೀ, ಕೇಂದ್ರ ಸರಕಾರವಾಗಲೀ ನನ್ನ ಮನವಿಯನ್ನು ಪುರಸ್ಕರಿಸಲಿಲ್ಲವಾದ್ದರಿಂದ ನಾನು ಅನಿವಾರ್ಯವಾಗಿ ಪೋಲೀಸರಲ್ಲಿ ಎಫ್’ಐಆರ್ ದಾಖಲಾಗುವಂತೆ ಮಾಡಿದೆ” ಅವರು ಹೇಳಿದರು.

2019ರ ಆಗಸ್ಟ್’ನಲ್ಲಿ ಅಸ್ಸಾಂ ಎನ್’ ಆರ್’ ಸಿ ಪ್ರಕಟವಾಗಿದ್ದರೂ ಆ ಸಂಬಂಧ ಸುತ್ತೋಲೆ ಹೊರಬಿದ್ದಿಲ್ಲ. 19 ಲಕ್ಷ ಜನ ಬಾಂಗ್ಲಾದೇಶದ ಅಕ್ರಮ ವಲಸಿಗರು ಎಂದು ಹೇಳಲಾಗಿದೆ. ಆದರೆ ಅಕ್ರಮ ವಲಸಿಗರು ಪೌರತ್ವ ಪಡೆದಿದ್ದರೆ, ಭಾರತದವರನ್ನೇ ಹಲವರನ್ನು ಅಕ್ರಮ ವಲಸಿಗರು ಎಂದು ಪೌರತ್ವ ನಿರಾಕರಿಸಲಾಗಿದೆ ಎಂದು ತಿಳಿದು ಬಂದಿದೆ.

Join Whatsapp