ಸಾವರ್ಕರ್ ಚಿತ್ರವನ್ನು ಫ್ರೀಡಂ ಫೈಟರ್ಸ್ ಗ್ಯಾಲರಿಯಲ್ಲಿ ಸೇರಿಸಲು ಬೆದರಿಕೆ: ರಕ್ಷಣೆ ಕೊಡಿ ಎಂದು ಪೊಲೀಸ್ ಮೆಟ್ಟಿಲೇರಿದ ಸದಸ್ಯರು

Prasthutha|

ಗೌರಿ ಬಿದನೂರು: ತಾಲೂಕಿನ ವಿದುರಾಶ್ವತ್ಥ ಪ್ರದೇಶದಲ್ಲಿರುವ ವೀರಸೌಧದ ಸ್ವಾತಂತ್ರ್ಯ ಹೋರಾಟಗಾರರ ಗ್ಯಾಲರಿಯಲ್ಲಿ ಸಾವರ್ಕರನ್ನು ಸೇರಿಸಬೇಕು ಮತ್ತು ಹಿಂದೂ ಕೋಮುವಾದಕ್ಕೆ ಸಂಬಂಧಿಸಿರುವ ಚಿತ್ರದಿಂದ ಆರ್ ಎಸ್ ಎಸ್ ಹೆಸರು ಕೈಬಿಡಬೇಕು ಎಂದು ಆರ್ ಎಸ್ ಎಸ್, ಬಜರಂಗದಳ ಮತ್ತು ವಿಎಚ್ ಪಿ ಗೂಂಡಾಗಳು ಬೆದರಿಕೆ ಹಾಕುತ್ತಿದ್ದು, ನಮಗೆ ರಕ್ಷಣೆ ಕೊಡಬೇಕು ಎಂದು ಸ್ವಾತಂತ್ರ್ಯ ಸಮಿತಿಯ ಸದಸ್ಯರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -

ವೀರ ಸೌಧದಲ್ಲಿರುವ ಸಮಗ್ರ ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ ಚಿತ್ರಗಳಿರುವ ಫೋಟೋ ಗ್ಯಾಲರಿಯಲ್ಲಿ ಸಾವರ್ಕರ್ ಚಿತ್ರಗಳನ್ನು ಅಳವಡಿಸಬೇಕು. ಕೋಮುವಾದಕ್ಕೆ ಸಂಬಂಧಿಸಿದ ಚಿತ್ರದಿಂದ ಆರ್ ಎಸ್ ಎಸ್ ಹೆಸರು ತೆಗೆಯಬೇಕು ಎಂದು ಕಳೆದ 20 ದಿನಗಳಿಂದ ಹಲವು ಬಾರಿ ಗೂಂಡಾಗಳು ನಮಗೆ ಒತ್ತಡ ಹಾಕುತ್ತಿದ್ದಾರೆ ಎಂದು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಸ್ವಾತಂತ್ರ್ಯ ಸಮಿತಿಯ ಗಂಗಾಧರ ಮೂರ್ತಿ ಮತ್ತು ಇನ್ನುಳಿದ ಸದಸ್ಯರು ಮನವಿ ಮಾಡಿದ್ದಾರೆ.

ಕರ್ನಾಟಕದ ಜಲಿಯನ್ ವಾಲಾ ಬಾಗ್ ಎಂದೇ ಖ್ಯಾತಿ ಪಡೆದ ವೀರಸೌಧದಲ್ಲಿ ಸ್ವಾತಂತ್ರ್ಯ ಹೋರಾಟದ ಘಟನೆ ಮೆಲುಕು ಹಾಕುವ ಗ್ಯಾಲರಿಯಲ್ಲಿ ಬಲಫಂಥೀಯ ರಾಜಕಾರಣದ ಚಿತ್ರಣವಿದ್ದು ಗಾಂಧೀ ಹತ್ಯೆಯನ್ನು ಬಿಂಬಿಸುವ ಗ್ಯಾಲರಿಯಲ್ಲಿ ಸಾವರ್ಕರ್ ಚಿತ್ರವಿದೆ ಇವೆರಡನ್ನೂ ತೆಗೆಯಬೇಕು ಎಂದು ಹಿಂದುತ್ವದ ಗೂಂಡಾಗಳಿಂದ ನಿರಂತರ ಬೆದರಿಕೆ ನೀಡಲಾಗುತ್ತಿದ್ದು ಇದೀಗ  ಈ ಬಗ್ಗೆ ಕೇಸ್ ದಾಖಲಾಗಿದೆ



Join Whatsapp