ಸೌದಿಯ ರಿತಾಜ್ ಅಲ್- ಹಾಸ್ಮಿ ಗೆ ಪುಸ್ತಕ ಸರಣಿಯ ವಿಶ್ವದ ಅತ್ಯಂತ ಕಿರಿಯ ಬರಹಗಾರ್ತಿ ಎಂಬ ಹೆಗ್ಗಳಿಕೆ

Prasthutha|

ನವದೆಹಲಿ: ವಿಶ್ವದ ಅತಿ ಕಿರಿಯ ಬರಹಗಾರ್ತಿ ಎಂಬ ಗಿನ್ನೆಸ್ ವಿಶ್ವದಾಖಲೆಗೆ ಸೌದಿಯ 12 ವರ್ಷದ ರಿತಾಜ್ ಅಲ್ ಹಾಸ್ಮಿ ಪಾತ್ರಳಾಗಿದ್ದಾಳೆ.

- Advertisement -

ತನ್ನ ಆರನೇ ವಯಸ್ಸಿನಲ್ಲಿ ಸಾಹಿತ್ಯಿಕ ಪ್ರಯಾಣವನ್ನು ಪ್ರಾರಂಭಿಸಿದ ಅಲ್ ಹಾಸ್ಮಿ ಒಂದು ಸರಣಿಯಲ್ಲಿ ಮೂರು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ,

ಈಕೆ 2019ರಲ್ಲೇ ಟ್ರೀಸರ್ ಆಫ್ ದಿ ಲಾಸ್ಟ್ ಸೀ ಮತ್ತು ಪೋರ್ಟಲ್ ಆಫ್ ದ ಹಿಡನ್ ವರ್ಲ್ಡ್ ಎಂಬ ಕಾದಂಬರಿಗಳನ್ನು ಪ್ರಕಟಸಿದ್ದಾಳೆ. ಆಗ ಈಕೆಯ ವಯಸ್ಸು ಕೇವಲ ಹತ್ತು ವರ್ಷವಾಗಿತ್ತು. 2021ರಲ್ಲಿ ಬಿಯಾಂಡ್ ದಿ ಫ್ಯೂಚರ್ ವರ್ಲ್ಡ್ ಎಂಬ ಮೂರನೇ ಕಾದಂಬರಿಯನ್ನು ಪ್ರಕಟಿಸಿದ್ದಾಳೆ. ಈಗಾಗಲೇ ನಾಲ್ಕನೇ ಕಾದಂಬರಿಯನ್ನು ಮುಗಿಸಿದ್ದು,  ಅದು ಬಿಡುಗಡೆಯ ಹಂತದಲ್ಲಿದೆ.

- Advertisement -

“ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಹೋಲ್ಡರ್ ಆಗಿರುವುದು ದೊಡ್ಡ ಸಾಧನೆಯಾಗಿದ್ದು, ಅದನ್ನು ಯುವ ಬರಹಗಾರರೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ. ಸವಾಲುಗಳನ್ನು ಸ್ವೀಕರಿಸಲು ಮತ್ತು ಅಡೆತಡೆಗಳನ್ನು ಎದುರಿಸಲು ಯುವ ಬರಹಗಾರರನ್ನು ಪ್ರೇರೇಪಿಸಲು ಮತ್ತು ಪ್ರೋತ್ಸಾಹಿಸಲು ನಾನು ಬಯಸುತ್ತೇನೆ” ಎಂದು ಅಲ್ ಹಾಸ್ಮಿ ಹೇಳಿದ್ದಾರೆ.

Join Whatsapp