ಸೌದಿ ಪ್ರೀಮಿಯರ್ ಲೀಗ್ | ಇಸ್ತಿಯಾಕ್ ಮುಹಮ್ಮದ್, ಶಮೀರ್ ಕಾರ್ನಾಡ್ ದುಬಾರಿ ಮೊತ್ತಕ್ಕೆ ಹರಾಜು

ಜುಬೈಲ್: ಮೂರನೆ ಆವೃತಿಯ ಸೌದಿ ಪ್ರೀಮಿಯರ್ ಲೀಗ್ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ಜುಬೈಲ್ ನ ಪುಳಿ ರೆಸ್ಟೋರೆಂಟ್ ನಲ್ಲಿ ನಡೆಯಿತು. ಸುಮಾರು 261 ಆಟಗಾರರನ್ನು ಒಳಗೊಂಡ ಹರಾಜು ಪ್ರಕ್ರಿಯೆಯಲ್ಲಿ ಎಂಟು ತಂಡಗಳು, ತಲಾ 18 ಆಟಗಾರರನ್ನು ತಮ್ಮ ತಂಡಕ್ಕೆ ಆಯ್ಕೆ ಮಾಡಿಕೊಂಡರು.

ಮೊದಲ ಹಂತದ ಎ ಹಾಗೂ ಬಿ ವಿಭಾಗದ ಹರಾಜಿನಲ್ಲಿ ತಂಡದ ಮಾಲಕರಿಗೆ ತಲಾ ಮೂರು ಆಟಗಾರರನ್ನು ಖರೀದಿಸುವ ಅವಕಾಶವಿತ್ತು. ನಂತರದ ಸುತ್ತಿನಲ್ಲಿ ಸಿ ವಿಭಾಗದಿಂದ ನಾಲ್ಕು ಹಾಗೂ ಡಿ ವಿಭಾಗದಿಂದ ಏಳು ಆಟಗಾರರನ್ನು ಖರೀದಿಸಿ ತಂಡವನ್ನು ಮಾಲಕರು ಸಮಬಲ ಮಾಡಿಕೊಂಡರು. ಹರಾಜಿನಲ್ಲಿ ಇಸ್ತಿಯಾಕ್ ಮುಹಮ್ಮದ್ ದುಬಾರಿ ಮೊತ್ತಕ್ಕೆ (1050 SAR) ಟೀಮ್ ಅಡ್ಕ ತಂಡಕ್ಕೆ ಮತ್ತು ಶಮೀರ್ ಕಾರ್ನಾಡ್ (1000 SAR) ಟೀಮ್ ಯುನಿಫೈಡ್ ಪಾಲಾದರು.

- Advertisement -

ಎಸ್ ಪಿಎಲ್ ಮೊದಲ ಆವೃತಿಯಲ್ಲಿ 6 ತಂಡಗಳ ಕ್ರೀಡಾಕೂಟದಲ್ಲಿ ಅಲ್ ಸಫಾ ಅಲ್ ಹಸ ಹಾಗೂ ಎರಡನೇ ಆವೃತಿಯಲ್ಲಿ 8 ತಂಡಗಳ ಕ್ರೀಡಾಕೂಟದಲ್ಲಿ ವೈಟ್ ಸ್ಟೋನ್ ಪ್ರಶಸ್ತಿ ಗೆದ್ದುಕೊಂಡಿತ್ತು. ಕಳೆದ ಎರಡೂ ಆವೃತಿಯಲ್ಲೂ ಸ್ನೇಹ ದೀಪ ಎಚ್ ಐ ವಿಯಿಂದ ಬಳಲುತ್ತಿರುವ ಮಕ್ಕಳಿಗೆ ಎಸ್ಪಿಎಲ್ ನೆರವಾಗಿದೆ. ಈ ಬಾರಿ ಹೆಚ್ಚಿನ ಸಹಾಯ ಮಾಡಿಕೊಡುವ ಉದ್ದೇಶವಿದ್ದು ಅದಕ್ಕಾಗಿ ಸಂಘಟಕರು ಈಗಾಗಲೆ ತಯಾರಿಯಲ್ಲಿದ್ದಾರೆ. ಮೂರನೇ ಆವೃತಿಯಲ್ಲಿ 8 ತಂಡಗಳು ಭಾಗವಹಿಸಲಿದೆ. ಅಕ್ಟೋಬರ್ 13 ಗುರುವಾರ ಸಂಜೆ ಜುಬೈಲ್’ನ ಅಲ್ ಫಲಾಹ್ ಮೈದಾನದಲ್ಲಿ ಕ್ರೀಡಾಕೂಟ ಆರಂಭಗೊಳ್ಳಲಿದೆ. ಅಕ್ಟೋಬರ್ 13, 14, 20, 21, 27 ಮತ್ತು 28 ರವರೆಗೆ 3 ವಾರಗಳ ಕಾಲ ಕ್ರೀಡಾಕೂಟ ನಡೆಯಲಿದೆ ಎಂದು ಸೈಫುಲ್ಲಾ ತೋಡಾರ್ ವಿವರಿಸಿದರು.

ಸಭಾ ಕಾರ್ಯಕ್ರಮವನ್ನು ಸಲೀಮ್ ಉಡುಪಿ ಉದ್ಘಾಟಿಸಿದರು. ಕ್ರೀಡಾಕೂಟದ ಮುಖ್ಯ ಪ್ರಾಯೋಜಕರಾದ ಅಡ್ಕ ಕಾಂಟ್ರಾಕ್ಟಿಂಗ್ ಇದರ ಶೇಖ್ ಅಹ್ಮದ್ ಬಾವ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಅಝೀಝ್ ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿದರು. ಕಳೆದ ಎರಡು ಆವೃತಿಗಳಿಂದ ಎಸ್ಪಿಎಲ್ ಸಂಘಟಕರು ಮಾಡಿದ ಸೇವೆ ಅಪಾರ. ಸ್ನೇಹದೀಪ ಎಂಬ ಸಂಸ್ಥೆಗೆ ನೀವುಗಳು ನೀಡುವ ಪ್ರಾದಾನ್ಯ ನಿಜಕ್ಕೂ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಟೀಮ್ ಯುನಿಫೈಡ್, ಫ್ರೆಂಡ್ಸ್ ಅಡ್ಕ, ಮ್ಯಾಕ್ ಝಿಗ್ಮ, ಕೆಎಮ್ ಟಿ ಸ್ಟ್ರೆಕರ್ಸ್, ಆರ್ ಬಿ ರೈಡರ್ಸ್, ಫಾಸ್ಟೆಕ್ ವಾರಿಯರ್ಸ್, ಅಲ್ ಬಾತೀನ್ ಸ್ಟೈಕರ್ಸ್ ಹಾಗೂ ಎಕ್ಸೆಲ್ ತಂಡಗಳಿಗೆ ಫ್ರಾಂಚೈಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಎಸ್ಪಿಎಲ್ ಆಯೋಜನೆ ಸದಸ್ಯರಾದ ಶಮೀರ್ ಅಹ್ಮದ್ ಬಾವ, ಫಯಾಝ್, ನಝೀರ್ ಕಲ್ಲೂರು ಇಬ್ಬ ಬಜ್ಪೆ ಹಾಗೂ ಸಫ್ವಾನ್ ಬಜ್ಪೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮನ್ನು ಸೈಫುಲ್ಲ ತೋಡಾರ್ ನಿರೂಪಿಸಿ ವಂದಿಸಿದರು.