ಮೇ 17ರಿಂದ ಸೌದಿ ಅಂತಾರಾಷ್ಟ್ರೀಯ ವಿಮಾನಯಾನ ಪ್ರಾರಂಭ

Prasthutha|

ರಿಯಾದ್ : ಸೌದಿ ಅರೇಬಿಯಾದಲ್ಲಿ ಕೋವಿಡ್ ಪ್ರಕರಣಗಳು ಹತೋಟಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಸೌದಿಯು ಅಂತಾರಾಷ್ಟ್ರೀಯ ವಿಮಾನಯಾನವನ್ನು ಮೇ 17ರಿಂದ ಪ್ರಾರಂಭಗೊಳಿಸಲು ತೀರ್ಮಾನಿಸಿದೆ. ಈ ಕುರಿತು ಸೌದಿ ನಾಗರಿಕ ವಿಮಾನಯಾನ ಸಂಸ್ಥೆ ಪ್ರಕಟನೆ ನೀಡಿದೆ.

- Advertisement -

ಈ ಹಿಂದೆ ಮಾರ್ಚ್ 31ರಂದು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಿ ಸೌದಿ ಪ್ರಕಟನೆ ನೀಡಿತ್ತು. ಆದರೆ ಆ ಬಳಿಕ ಕೋವಿಡ್ ಪ್ರಕರಣಗಳು ತೀವ್ರವಾಗಿ ಹೆಚ್ಚಾದ ಹಿನ್ನೆಲೆಯಲ್ಲಿ ಆ ಆದೇಶವನ್ನು ಅಮಾನತಿನಲ್ಲಿಡಲಾಗಿತ್ತು. ಇದೀಗ ಹೊರಡಿಸಿರುವ ಹೊಸ ಪ್ರಕಟಣೆಯ ಪ್ರಕಾರ ಮೇ 17 ರಿಂದ ವಿಮಾನಯಾನ ಪ್ರಾರಂಭಿಸಲು ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಅಧಿಕೃತ ಸುತ್ತೋಲೆ ಹೊರಡಿಸಿದೆ

Join Whatsapp