ರಿಯಾದ್ : ಜಾಗತಿಕ ಮಟ್ಟದಲ್ಲಿ ಇನ್ನೂ ತನ್ನ ಕರಾಳತೆಯನ್ನು ಕಡಿಮೆಗೊಳಿಸದ ಕೋವಿಡ್ -19 ತಡೆಯುವ ನಿಟ್ಟಿನಲ್ಲಿ ಸೌದಿ ಅರೇಬಿಯಾ ಮೇ 17 ರ ಬಳಿಕವೂ ತನ್ನ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ನಿಷೇಧವನ್ನು ಮುಂದುವರೆಸಲಿದೆ ಎನ್ನಲಾಗಿದೆ. ಭಾರತ ಸೇರಿದಂತೆ ಒಟ್ಟು 20 ರಾಷ್ಟ್ರಗಳಿಗೆ ಈ ನಿಷೇಧದ ಬಿಸಿ ತಟ್ಟಲಿದೆ. ಈ ಕುರಿತು ಅಧಿಕೃತ ಹೇಳಿಕೆಯಲ್ಲಿ ಹೇಳಿರುವ ಸೌದಿಯಾ ವಿಮಾನಯಾನ ಸಂಸ್ಥೆ, ಮೇ 17 ರ ಬಳಿಕವೂ ತಮ್ಮ ಸೇವೆಯ ಅಲಭ್ಯತೆಯ ಕುರಿತು ತಿಳಿಸಿದೆ.
ಆಂತರಿಕ ಸಚಿವಾಲಯ ಹೆಸರಿಸಿಸುವ 20 ರಾಷ್ಟ್ರಗಳಲ್ಲಿ ಭಾರತ ಸೇರಿದಂತೆ ಅರ್ಜೆಂಟೀನಾ, ಜರ್ಮನಿ, ಪೋರ್ಚುಗಲ್, ಟರ್ಕಿ, ಐರ್ಲೆಂಡ್, ಇಟಲಿ, ಪಾಕಿಸ್ತಾನ, ಯುಎಇ, , ಯುಎಸ್, ಇಂಡೋನೇಷ್ಯಾ, ಸ್ವೀಡನ್, ಸ್ವಿಟ್ಜರ್ಲೆಂಡ್, ಈಜಿಪ್ಟ್, ಜಪಾನ್, ದಕ್ಷಿಣ ಆಫ್ರಿಕಾ, ಅರ್ಜೆಂಟೀನಾ, ಬ್ರೆಜಿಲ್, ಯುಕೆ, ಲೆಬನಾನ್, ಫ್ರಾನ್ಸ್ ದೇಶಗಳು ಆ ಪಟ್ಟಿಯಲ್ಲಿದೆ.