►ಈ ಬಾರಿ ಹಜ್ ನಿರ್ವಹಿಸಲಿರುವ 1.75 ಲಕ್ಷ ಭಾರತೀಯರು
ಜಿದ್ದಾ: 2023ರಲ್ಲಿ ಸೌದಿಅರೇಬಿಯಾ ಭಾರತಕ್ಕೆ ಇತಿಹಾಸದಲ್ಲೇ ಅತ್ಯಧಿಕ ಹಜ್ ಕೋಟಾ ನೀಡಿದ್ದು, ಈ ಬಾರಿ 1.75 ಲಕ್ಷ ಭಾರತೀಯ ಯಾತ್ರಾರ್ಥಿಗಳು ಹಜ್ ನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ.
ಈ ಬಾರಿ 1,75,025 ಭಾರತೀಯ ಹಜ್ ಯಾತ್ರಿಕರು ಹಜ್ ನಿರ್ವಹಿಸಲಿದ್ದಾರೆ. ಇದು ಇತಿಹಾಸದಲ್ಲೇ ಅತ್ಯಧಿಕವಾಗಿದೆ.
ಸೋಮವಾರ ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಉಪ ಮಂತ್ರಿ ಮತ್ತು ಭಾರತೀಯ ಕಾನ್ಸುಲ್ ಜನರಲ್ ಅವರು ಜಿದ್ದಾದಲ್ಲಿರುವ ಕಚೇರಿಯಲ್ಲಿ ಸಹಿ ಮಾಡಿದ ದ್ವಿಪಕ್ಷೀಯ ಒಪ್ಪಂದದ ಭಾಗವಾಗಿ ಈ ಘೋಷಣೆ ಹೊರಡಿಸಲಾಗಿದೆ.
2022 ರಲ್ಲಿ 79,237 ಭಾರತೀಯ ಯಾತ್ರಾರ್ಥಿಗಳು ಹಜ್ ನಿರ್ವಹಿಸಿದ್ದರು.
2019 ರಲ್ಲಿ 1.4 ಲಕ್ಷ ಯಾತ್ರಿಕರು ಹಜ್ ಯಾತ್ರೆ ಕೈಗೊಂಡಿದ್ದರು. ಇದು ಭಾರತಕ್ಕೆ ಈವರೆಗೆ ಅತ್ಯಧಿಕ ಕೋಟಾ ಆಗಿತ್ತು. 2020ರಲ್ಲಿ COVID-19 ಸಾಂಕ್ರಾಮಿಕ ರೋಗದಿಂದಾಗಿ ಹಜ್ ಅನ್ನು ರದ್ದುಗೊಳಿಸಲಾಗಿತ್ತು.
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದರಿಂದ ಈ ವರ್ಷ ಯಾತ್ರೆಯ ವೆಚ್ಚಗಳು ಹೆಚ್ಚಾಗುವ ಆತಂಕ ಭಾರತೀಯ ಯಾತ್ರಾರ್ಥಿಗಳನ್ನು ಕಾಡುತ್ತಿದೆ.