ಫಿಫಾ ವಿಶ್ವಕಪ್: ಐತಿಹಾಸಿಕ ಗೆಲುವಿನ ಸಂಭ್ರಮದಲ್ಲಿ ಸಾರ್ವಜನಿಕ ರಜೆ ಘೋಷಿಸಿದ ಸೌದಿ ಅರೇಬಿಯಾ

ರಿಯಾದ್: ನಾಳೆ, ನವೆಂಬರ್ 23ರಂದು ಸೌದಿ ಅರೇಬಿಯಾ ಸಾರ್ವಜನಿಕ ರಜೆ ಘೋಷಿಸಿದೆ. ಫಿಫಾ ವಿಶ್ವಕಪ್ನಲ್ಲಿ ಐತಿಹಾಸಿಕ ಗೆಲುವಿನ ಸಂಭ್ರಮದಲ್ಲಿ ಸೌದಿ ಅರೇಬಿಯಾ ರಜೆ ಘೋಷಣೆ ಮಾಡಿದೆ.

ಇದು ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿರುವ ಎಲ್ಲಾ ಉದ್ಯೋಗಿಗಳಿಗೆ ಮತ್ತು ದೇಶದಾದ್ಯಂತದ ಎಲ್ಲಾ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ ಎಂದು ವರದಿಯಾಗಿದೆ. ಮಂಗಳವಾರ ದೋಹಾದ ಲುಸೈಲ್ ಸ್ಟೇಡಿಯಂನಲ್ಲಿ ಫೇವರಿಟ್ ಅರ್ಜೆಂಟೀನಾವನ್ನು ಸೌದಿ ಅರೇಬಿಯಾ 2-1 ಗೋಲುಗಳಿಂದ ಮಣಿಸಿದೆ.

- Advertisement -

ವಿಶ್ವಕಪ್ ನಲ್ಲಿ ಪಂದ್ಯ ಗೆದ್ದ ನಂತರ ಸಾರ್ವಜನಿಕ ರಜೆ ಘೋಷಿಸಿರುವುದು ಇದೇ ಮೊದಲಲ್ಲ. 1990 ರ ವಿಶ್ವಕಪ್ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಕ್ಯಾಮರೂನ್‌ ಜಯಗಳಿಸಿದ ಮರುದಿನ ಕ್ಯಾಮರೂನ್‌ನಲ್ಲಿ ರಜಾದಿನವನ್ನು ಘೋಷಿಸಲಾಗಿತ್ತು.