ಟಿ20 | ಮೂರನೇ ಪಂದ್ಯ ಟೈ, 1-0 ಅಂತರದಲ್ಲಿ ಸರಣಿ ಗೆದ್ದ ಟೀಮ್‌ ಇಂಡಿಯಾ

Prasthutha|

ನೇಪಿಯರ್‌; ನ್ಯೂಜಿಲೆಂಡ್‌-ಟೀಮ್‌ ಇಂಡಿಯಾ ನಡುವಿನ ಟಿ20 ಸರಣಿಯ ನಿರ್ಣಾಯಕ ಮತ್ತು ಅಂತಿಮ ಪಂದ್ಯ ಟೈನಲ್ಲಿ ಅಂತ್ಯವಾಗಿದೆ. ಈ ಮೂಲಕ 1-0 ಅಂತರದಲ್ಲಿ ಸರಣಿ ಭಾರತದ ಕೈವಶವಾಗಿದೆ.

- Advertisement -

ನೇಪಿಯರ್‌ನಲ್ಲಿ ಮಂಗಳವಾರ ನಡೆದ 3ನೇ ಟಿ20 ಪಂದ್ಯದಲ್ಲಿ ಕಿವೀಸ್‌ ನೀಡಿದ್ದ 161 ರನ್‌ಗಳನ್ನು ಬೆನ್ನಟ್ಟುವ ವೇಳೆ ಭಾರತ,  9 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟದಲ್ಲಿ 75 ರನ್‌ಗಳಿಸಿತ್ತು. ಈ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ವಿಜಯಿಗಳನ್ನು ನಿರ್ಧರಿಸಲು ಡಕ್ವರ್ಥ್‌ ಲೂಯಿಸ್‌ ನಿಯಮದ ಮೊರೆ ಹೋಗಲಾಯಿತಾದರೂ, ಅಲ್ಲಿ ಸಮಬಲ ಕಂಡು ಬಂದ ಕಾರಣ ಪಂದ್ಯವು ಟೈ ಆಗಿದೆ ಎಂದು ಘೋಷಿಸಲಾಯಿತು.

3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ವೆಲ್ಲಿಂಗ್ಟನ್‌ನಲ್ಲಿ ಮಳೆಯಿಂದಾಗಿ ರದ್ದಾಗಿತ್ತು. ಮೌಂಟ್‌ ಮೌನ್‌ಗೌನಿಯಲ್ಲಿ ನಡೆದ 2ನೇ ಪಂದ್ಯದಲ್ಲಿ ಹಾರ್ದಿಕ್‌ ಪಡೆ, 65ರನ್‌ಗಳ ಜಯಭೇರಿ ಬಾರಿಸಿತ್ತು.

- Advertisement -

ಕಿವೀಸ್‌ ತಂಡಕ್ಕೆ ದುಬಾರಿಯಾದ ಕೊನೆಯ ಎಸೆತದ ಮಿಸ್‌ ಫೀಲ್ಡ್‌ !

ಇಶ್‌ ಸೋಧಿ ಎಸದ 9ನೇ ಓವರ್‌ನ ಅಂತಿಮ ಎಸೆತವನ್ನು ಎದುರಿಸಿದ ದೀಪಕ್‌ ಹೂಡ, ಪಾಯಿಂಟ್‌ ಕಡೆಗೆ ಬಾರಿಸಿದ್ದರು. ಈ ವೇಳೆ ಕ್ಷೇತ್ರರಕ್ಷಣೆಯಲ್ಲಿದ್ದ ಮಿಚೆಲ್‌ ಸ್ಯಾಂಟ್ನರ್‌ ಚೆಂಡನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದರು. ಇದರ ಪ್ರಯೋಜನೆ ಪಡೆದ ಹೂಡ-ಹಾರ್ದಿಕ್‌ ಒಂಟಿ ರನ್‌ ಪಡೆಯುವಲ್ಲಿ ಯಶಸ್ವಿಯಾದರು. ಈ ಒಂಟಿ ರನ್‌ ನಿಯಂತ್ರಿಸಿದ್ದರೆ ಡಕ್ವರ್ಥ್‌ ಲೂಯಿಸ್‌ ನಿಯಮದ ಪ್ರಕಾರ ಪಂದ್ಯದಲ್ಲಿ ಗೆಲುವು ನ್ಯೂಜಿಲೆಂಡ್‌ ಪಾಲಾಗುತ್ತಿತ್ತು. ಸರಣಿಯೂ ಸಮಬಲವಾಗುತ್ತಿತ್ತು. ಆದರೆ ಅಧೃಷ್ಠ ಭಾರತದ ಕೈ ಹಿಡಿಯಿತು. ಅತಿಥೇಯರು ನಿರಾಸೆ ಅನುಭವಿಸಿದರು.

ನೇಪಿಯರ್‌ ಅಂಗಳದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ನ್ಯೂಜಿಲೆಂಡ್‌ 19.4 ಓವರ್‌ಗಲ್ಲಿ 160 ರನ್‌ಗಳಿಸಿತ್ತು. ಆರಂಭಿಕ್‌ ಡೆವೋನ್‌ ಕಾನ್ವೆ 59 ಮತ್ತು ಗ್ಲೆನ್‌ ಫಿಲಿಪ್ಸ್‌ ಬಿರುಸಿನ 54 ರನ್‌ಗಳಿಸಿದ್ದರು. ಇವರಿಬ್ಬರನನು ಹೊರತು ಪಡಿಸಿ ಉಳಿದ ಬ್ಯಾಟರ್‌ಗಳು ಸಂಪೂರ್ಣ ವಿಫಲರಾದರು. ಭಾರತದ ಪರ ಜೀವನಶ್ರೇಷ್ಠ ಟಿ20 ಬೌಲಿಂಗ್‌ ಪ್ರದರ್ಶನ ನೀಡಿದ ಮುಹಮ್ಮದ್‌ ಸಿರಾಜ್‌ ಮತ್ತು ಅರ್ಶ್‌ದೀಪ್‌ ಸಿಂಗ್‌ ತಲಾ 4 ವಿಕೆಟ್‌ ಪಡೆದರು.

ಚೇಸಿಂಗ್‌ ವೇಳೆ ಕೇವಲ 21 ರನ್‌ಗಳಿಸುವಷ್ಟರಲ್ಲೇ ಟೀಮ್‌ ಇಂಡಿಯಾ 3 ವಿಕೆಟ್‌ ಕಳೆದುಕೊಂಡಿತ್ತು. ಆರಂಭಿಕರಾದ ಇಶಾನ್ ಕಿಶನ್ (10) ಮತ್ತು ರಿಷಭ್ ಪಂತ್ (11) ಕಳೆದ ಪಂದ್ಯದ ಹೀರೋ ಸೂರ್ಯಕುಮಾರ್‌ ಯಾದವ್‌ (13) ಹಾಗೂ  ಶ್ರೇಯಸ್ ಅಯ್ಯರ್ ಮುನ್ನವೇ ಖಾತೆ ತೆರೆಯುವ ಮುನ್ನವೇ ವಿಕೆಟ್‌ ಒಪ್ಪಿಸಿದ್ದರು. ಆದರೆ ನಾಯಕನ ಜವಾಬ್ಧಾರಿಯುತ ಆಟವಾಡಿದ ಹಾರ್ದಿಕ್‌ ಪಾಂಡ್ಯ ಅಜೇಯ 30 ರನ್‌ಗಳಿಸಿದರು.

ಟಿ20 ಬಳಿಕ ಏಕದಿನ ಸರಣಿಯ ಮೊದಲ ಪಂದ್ಯವು ಆಕ್ಲಂಡ್‌ನಲ್ಲಿ ಶುಕ್ರವಾರ ನಡೆಯಲಿದೆ.

Join Whatsapp