ಸೌದಿಯಲ್ಲಿ ಪೋಲೆಂಡ್ ನ ಕೋಳಿ , ಮೊಟ್ಟೆ ಆಮದು ನಿಷೇಧ

Prasthutha|

ರಿಯಾದ್: ಸೌದಿ ಅರೇಬಿಯಾದ ಆಹಾರ ಮತ್ತು ಔಷಧ ಪ್ರಾಧಿಕಾರ (ಎಸ್ಎಫ್ಡಿಎ) ಪೋಲೆಂಡ್ ನ ವೀಲ್ಕೊಪೊಲ್ಸ್ಕಿ ಪ್ರದೇಶದಿಂದ ಕೋಳಿ ಮಾಂಸ, ಟೇಬಲ್ ಮೊಟ್ಟೆಗಳು ಮತ್ತು ಅವುಗಳ ಉತ್ಪನ್ನಗಳು ಮತ್ತು ಸಲಕರಣೆಗಳ ಆಮದಿನ ಮೇಲೆ ತಾತ್ಕಾಲಿಕ ನಿಷೇಧವನ್ನು ವಿಧಿಸಿದೆ.

- Advertisement -

ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆ (ಡಬ್ಲ್ಯುಒಎಎಚ್) ಹೊರಡಿಸಿದ ತಕ್ಷಣದ ಅಧಿಸೂಚನೆಯ ವರದಿಯನ್ನು ಸ್ವೀಕರಿಸಿದ ನಂತರ ಪ್ರಾಧಿಕಾರದ ಈ ಕ್ರಮ ಬಂದಿದೆ, ತೀವ್ರವಾದ ಹಕ್ಕಿಜ್ವರದ ಹರಡುವಿಕೆಯ ನಂತರ ಡಬ್ಲ್ಯುಒಎಎಚ್ ಈ ಆಧಿಸೂಚನೆ ಬಿಡುಗಡೆ ಮಾಡಿದೆ.

ಆರೋಗ್ಯದ ಮುನ್ನೆಚ್ಚರಿಕೆಗಳು, ನಿಯಮಗಳು ಮತ್ತು ಗುಣಮಟ್ಟದ ಮಾನ್ಯತೆ ಮಾನದಂಡಗಳಿಗೆ ಅನುಗುಣವಾಗಿ ಉತ್ಪನ್ನವು ವೈರಸ್-ಮುಕ್ತವಾಗಿದೆ ಎಂದು ದೃಢೀಕರಿಸುವ ಪೋಲೆಂಡ್ನಿಂದ ಗುರುತಿಸಲ್ಪಟ್ಟ ಅಧಿಕೃತ ಸಂಸ್ಥೆಯು ನೀಡಿದ ಆರೋಗ್ಯ ಪ್ರಮಾಣಪತ್ರವನ್ನು ಆಧರಿಸಿ ನಿಷೇಧದಿಂದ ವಿನಾಯಿತಿ ನೀಡಲಾಗುವುದು ಎಂಬುದಾಗಿ ವರದಿಯಾಗಿದೆ.

Join Whatsapp