ಸೌದಿ: ಪ್ರಾಯೋಜಕತ್ವ ಬದಲಾವಣೆಗೆ ಮಿತಿ ನಿಗದಿಪಡಿಸಿದ ಅಲ್-ಜವಾಝಾತ್

Prasthutha|

ರಿಯಾದ್: ಸೌದಿ ಅರೇಬಿಯಾದ ಗೃಹ ಕಾರ್ಮಿಕರ ವೀಸಾದಲ್ಲಿರುವ ಉದ್ಯೋಗಿಗಳ ಪ್ರಾಯೋಜಕತ್ವದ ಬದಲಾವಣೆಯ ಮೇಲೆ ಪಾಸ್‌ಪೋರ್ಟ್ ನಿರ್ದೇಶನಾಲಯವು ಮಿತಿಯನ್ನು ನಿಗದಿಪಡಿಸಿದ್ದು,  ಅಂತಹ ಉದ್ಯೋಗಿಗಳು ನಾಲ್ಕು ಬಾರಿಗಿಂತ ಹೆಚ್ಚಾಗಿ  ಪ್ರಾಯೋಜಕತ್ವವನ್ನು ಬದಲಾಯಿಸುವಂತಿಲ್ಲ ಎಂದು ಜವಾಝಾತ್ ತಿಳಿಸಿದೆ.

- Advertisement -

ಗೃಹ ಕಾರ್ಮಿಕರ ಪ್ರಾಯೋಜಕತ್ವ ಬದಲಾವಣೆ ಪ್ರಕ್ರಿಯೆಯನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ಜವಾಝಾತ್ ಮಿತಿಯನ್ನು ನಿರ್ಣಯಿಸಿದೆ. ವೈಯಕ್ತಿಕ ಪೋರ್ಟಲ್ ಅಬ್ಶೀರ್ ಮೂಲಕ ಇದಕ್ಕೆ ಸೌಲಭ್ಯವಿದ್ದು, ಪ್ರಸ್ತುತ ಗೃಹ ಕಾರ್ಮಿಕರ ವೀಸಾಗಳಲ್ಲಿ ಉದ್ಯೋಗದಲ್ಲಿರುವವರಿಗೆ ಪ್ರಾಯೋಜಕತ್ವದ ಬದಲಾವಣೆಯನ್ನು ಪೂರ್ಣಗೊಳಿಸುವುದು ಸುಲಭವಾಗಿದೆ.

ಪ್ರಸ್ತುತ ಪ್ರಾಯೋಜಕರು ಇಚ್ಛೆಯನ್ನು ವ್ಯಕ್ತಪಡಿಸಿದ ನಂತರ ಪ್ರಕ್ರಿಯೆಗಳನ್ನು ಪ್ರಾರಂಭಿಸಬಹುದಾಗಿದ್ದು, ಕೆಲಸಗಾರ ಮತ್ತು ಹೊಸ ಪ್ರಾಯೋಜಕರು ಇದನ್ನು ಒಪ್ಪಿಕೊಂಡ ನಂತರ, ಬದಲಾವಣೆಯು ಪೂರ್ಣಗೊಳ್ಳುತ್ತದೆ.

- Advertisement -

ಕಾರ್ಮಿಕರ ಹೆಸರಿನಲ್ಲಿ ಯಾವುದೇ ಸಂಚಾರ ನಿಯಮ ಉಲ್ಲಂಘನೆಯಾಗದಿರುವುದು, ಹುರುಬ್ ದಾಖಲಿಸದಿರುವುದು ಮತ್ತು ಪ್ರಸ್ತುತ ಇಖಾಮಾದಲ್ಲಿ 15 ದಿನಗಳಿಗಿಂತ ಕಡಿಮೆಯಲ್ಲದ ಅವಧಿಯನ್ನು ಹೊಂದಿರುವುದು ಮುಂತಾದ ಷರತ್ತುಗಳನ್ನು ಪ್ರಾಯೋಜಕತ್ವದ ಬದಲಾವಣೆಗೆ ನಿಗದಿಪಡಿಸಲಾಗಿದೆ.

Join Whatsapp