ಚರ್ಚ್ ಧ್ವಂಸ ಪ್ರಕರಣ: ಇಬ್ಬರು ಬಿಜೆಪಿ ಮುಖಂಡರು ಸೇರಿ 11 ಮಂದಿ ಬಂಧನ

Prasthutha|

ನಾರಾಯಣಪುರ: ಚರ್ಚ್ ಧ್ವಂಸಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಬಿಜೆಪಿಯ ಹಾಲಿ ಮತ್ತು ಮಾಜಿ ಜಿಲ್ಲಾಧ್ಯಕ್ಷರು ಸೇರಿದಂತೆ ಕನಿಷ್ಠ 11 ಜನರನ್ನು ಛತ್ತೀಸ್ಗಢ ಪೊಲೀಸರು ಬಂಧಿಸಿದ್ದಾರೆ.

- Advertisement -

ನಾರಾಯಣಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸದಾನಂದ್ ಕುಮಾರ್ ಚರ್ಚ್ ಅನ್ನು ಧ್ವಂಸಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರಾದ ರುಪ್ಸೆ ಸಲಾಂ (55) ಮತ್ತು ನಾರಾಯಣ ಮಾರ್ಕಮ್ (50) ಅವರನ್ನು ಬಂಧಿಸಲಾಗಿದೆ. ಅಕ್ಟೋಬರ್‌ನಲ್ಲಿ ರುಪ್ಸೆ ಸಲಾಂ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು ಮತ್ತು ಅಂದಿನಿಂದ, ನಾರಾಯಣಪುರದಾದ್ಯಂತ ಗ್ರಾಮಗಳಲ್ಲಿ ಕ್ರಿಶ್ಚಿಯನ್ ಮಿಷನರಿಗಳ ವಿರುದ್ಧ ಇವರಿಬ್ಬರು ಹಲವಾರು ಅಭಿಯಾನಗಳನ್ನು ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಧಾರ್ಮಿಕ ಮತಾಂತರದಂತಹ ಸೂಕ್ಷ್ಮ ವಿಷಯದ ಮೇಲೆ ಹಲವಾರು ಹಿಂಸಾತ್ಮಕ ಘಟನೆಗಳು ನಡೆದಿದ್ದವು.

ಬಸ್ತಾರ್ ಇನ್ಸ್’ಪೆಕ್ಟರ್ ಜನರಲ್ ಆಫ್ ಪೋಲೀಸ್ (ಐಜಿಪಿ) ಪಿ. ಸುಂದರರಾಜ್ ಅವರು ಸುಮಾರು 2,000 ಜನರು ಸೇರಿದ್ದ ಸಭೆಯನ್ನು ಕರೆದಿದ್ದಕ್ಕಾಗಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಹೇಳಿದರು. ಚರ್ಚ್ ದಾಳಿಗಿಂತ ಮೊದಲು ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಅದರಲ್ಲಿ ಒಂದು ಗುಂಪು ಚರ್ಚ್ ಮೇಲೆ ದಾಳಿ ಮಾಡಿತು ಎಂದು ಅವರು ಮಾಹಿತಿ ನೀಡಿದರು.

- Advertisement -

ಇತ್ತೀಚಿನ ಘಟನೆಗಳು ರಾಜ್ಯಾದ್ಯಂತ ಕೋಲಾಹಲಕ್ಕೆ ಕಾರಣವಾಗಿದ್ದು, ಬಿಜೆಪಿ ಈಗ ಧಾರ್ಮಿಕ ಮತಾಂತರದ ವಿಷಯದ ಬಗ್ಗೆ ಕಾಂಗ್ರೆಸ್ ಅನ್ನು ಗುರಿಯಾಗಿಸಿದೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಗೆ ಧಾರ್ಮಿಕ ಮತಾಂತರಗಳು ಕೇಂದ್ರಬಿಂದುವಾಗಲಿವೆ ಎಂದು ಮೂಲಗಳು ತಿಳಿಸಿದೆ. ಬುಡಕಟ್ಟು ಹಳ್ಳಿಗಳಲ್ಲಿ “ಕ್ರಿಶ್ಚಿಯನ್ ಮುಕ್ತ ರಾಜ್ಯ” ರಚಿಸಲು ಅಭಿಯಾನವನ್ನು ಪ್ರಾರಂಭಿಸುತ್ತಿದೆ ಎಂದು ಛತ್ತೀಸ್’ಗಢ ಕ್ರಿಶ್ಚಿಯನ್ ಫೋರಂ ಆರೋಪಿಸಿದೆ.

Join Whatsapp