ವ್ಯಾಪಾರಿ ಬುದ್ಧಿಯ ಮೋದಿ ಹಿಂದುಳಿದ ವರ್ಗದವರನ್ನು ಬದುಕಲು ಬಿಡುತ್ತಿಲ್ಲ: ಸತೀಶ್ ಜಾರಕಿಹೊಳಿ ಟೀಕೆ

Prasthutha|

ದಾವಣಗೆರೆ: ವ್ಯಾಪಾರಿ ಬುದ್ಧಿಯ ಮೋದಿ ದೇಶದಲ್ಲಿ ಬಡವರು, ಎಸ್ಸಿ-ಎಸ್ಟಿ, ಹಿಂದುಳಿದ ವರ್ಗದವರನ್ನು ಬದುಕಲು ಬಿಡುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.

- Advertisement -

ಈಶ್ವರಪ್ಪ ರನ್ನು ಬಂಧನ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು,‘ನಾನು ಗುಜರಾತಿ. ನನ್ನರಕ್ತದಲ್ಲಿ ವ್ಯಾಪಾರ ಬುದ್ಧಿ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸದಲ್ಲಿದ್ದಾಗ ಹೇಳಿದ್ದರು. ಅದನ್ನು ಅವರು ತಮ್ಮ ಆಡಳಿತದಲ್ಲಿ ಸಾಬೀತು ಮಾಡಿ ಜನರಿಗೆ ಸಂಕಷ್ಟ ತಂದಿದ್ದಾರೆ.ಉಜ್ವಲ ಯೋಜನೆಯಡಿ ಅಡುಗೆ ಅನಿಲ ನೀಡಿ ಬಳಿಕ ಸಬ್ಸಿಡಿ ತೆಗೆದು ಹಾಕಿದ್ದಾರೆ. ಈ ಮೂಲಕ ಈ ಯೋಜನೆಯಲ್ಲಿ ಮೋದಿ ಸರ್ಕಾರ ಲಾಭ ಗಳಿಸಿದೆ. ಚುನಾವಣೆ ಸಂದರ್ಭದಲ್ಲಿ ಸುಳ್ಳು ಹೇಳಿ ಮತ ಪಡೆಯುತ್ತಾರೆ ಎಂದು ಟೀಕಿಸಿದರು.

Join Whatsapp