ಅಜಿತ್ ಪವಾರ್ ಬಣ ಸೇರಿದ ಶಾಸಕಿ ಸರೋಜ್ ಅಹಿರೆ

Prasthutha|

ನಾಸಿಕ್: ಎನ್ ಸಿಪಿ ಶಾಸಕಿ ಸರೋಜ್ ಅಹಿರೆ ಇಂದು ತಮ್ಮ ಬೆಂಬಲವನ್ನು ಅಜಿತ್ ಪವಾರ್ ಅವರಿಗೆ ಘೋಷಿಸಿದ್ದಾರೆ.

- Advertisement -


ಆ ಮೂಲಕ ನಾಸಿಕ್ ಜಿಲ್ಲೆಯ ಆರು ಶಾಸಕರು ಅಜಿತ್ ಪವಾರ್ ಬಣ ಸೇರಿದಂತಾಗಿದೆ.


ಸರೋಜ್ ಅಹಿರೆ ಅವರು ನಾಸಿಕ್ ನ ಡಿಯೋಲಲಿ ಕ್ಷೇತ್ರದ ಶಾಸಕಿಯಾಗಿದ್ದು, ಎನ್ ಸಿಪಿ ಎರಡು ಬಣಗಳಾಗಿ (ಶರದ್ ಪವಾರ್ ಬಣ ಮತ್ತು ಅಜಿತ್ ಪವಾರ್ ಬಣ) ವಿಭಜನೆಯಾದ ದಿನದಿಂದಲೂ ಅವರು ಯಾವುದೇ ಪಕ್ಷಕ್ಕೆ ಬಹಿರಂಗವಾಗಿ ತಮ್ಮ ಬೆಂಬಲವನ್ನು ಘೋಷಿಸಿರಲಿಲ್ಲ. ಇದೀಗ ಅಧಿಕೃತವಾಗಿ ಅಜಿತ್ ಪವಾರ್ ಬಣ ಸೇರಿಕೊಂಡಿದ್ದಾರೆ.

- Advertisement -


‘ಅಭಿವೃದ್ಧಿಗಾಗಿ ಅಧಿಕಾರದಲ್ಲಿ ಉಳಿಯುವುದು ಅವಶ್ಯಕವಾಗಿದೆ. ನಾನು ಅಜಿತ್ ದಾದಾ ಜೊತೆಗಿದ್ದೇನೆ. ಈ ಹಿಂದೆ ನನ್ನ ಕ್ಷೇತ್ರದ ಅಭಿವೃದ್ಧಿಗೆ ಅಜಿತ್ ಪವಾರ್ ಅವರು ಸಹಕಾರ ನೀಡಿದ್ದರು. ಭವಿಷ್ಯದಲ್ಲಿಯೂ ಇದೇ ರೀತಿ ಮುಂದುವರಿಯುವಂತೆ ನಾನು ಅವರನ್ನು(ಅಜಿತ್ ಪವಾರ್) ವಿನಂತಿಸುತ್ತೇನೆ‘ ಎಂದು ಸರೋಜ್ ಅಹಿರೆ ಹೇಳಿದ್ದಾರೆ.